ತುಮಕೂರು: ಕರ್ತವ್ಯನಿರತ ಎಎಸ್‍ಐ ನಡುರಸ್ತೆಯಲ್ಲೇ ಆಲ್ಕೋಹಾಲಿಕ್ ಪರೀಕ್ಷೆಗೊಳಗಾಗಿ ಮುಜುಗರಕ್ಕಿಡಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಸಂಚಾರಿ ಠಾಣೆಯ ಎಎಸ್‍ಐ ಕಾಂತರಾಜು ಆಲ್ಕೋಹಾಲ್ ಪರೀಕ್ಷೆಗೊಳಗಾದವರು. ಮಧ್ಯಾಹ್ನವೇ ಬೈಕ್ ಸವಾರರನ್ನು ಅಡ್ಡಗಟ್ಟಿ ಎನ್, ಎಷ್ಟು ಕುಡಿದಿದ್ಯಾ ಎಂದು ಎಎಸ್‍ಐ ಕಾಂತರಾಜು ಸುಖಾಸುಮ್ಮನೆ ಕಿರಿಕ್ ಮಾಡುತ್ತಿದ್ದರು ಎನ್ನಲಾಗಿದೆ. ಅದೇ ರೀತಿ ಚಿಕನವಜ್ರ ಗ್ರಾಮದ ಲೋಕೇಶ್ ಎನ್ನುವ ವ್ಯಕ್ತಿಗೂ ಕಿರಿಕ್ ಮಾಡಿದ್ದಾರೆ. ಕಿರುಕುಳ ಸಹಿಸದ ಲೋಕೇಶ್ ನಾನಲ್ಲ. ನೀವು ಕುಡಿದಿದ್ದೀರಾ ಎಂದು ಪ್ರತ್ಯುತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘಿಸಿದ ಪೊಲೀಸ್ರಿಗೂ ಬಿತ್ತು ದಂಡ
Advertisement
Advertisement
ಹೌದು. ನಾನು 10 ಬಾಟಲ್ ಕುಡಿದಿದ್ದೀನಿ. ಏನಿವಾಗ, ಏನ್ ಮಾಡ್ಕೋತಿಯಾ ಎಂದು ಕಾಂತರಾಜು ದರ್ಪ ತೋರಿದ್ದಾರೆ. ಎಎಸ್‍ಐ ಏರುಧ್ವನಿಯಲ್ಲಿ ಮಾತನಾಡುತ್ತಿರುವುದನ್ನು ಕಂಡು ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದರು. ಬಳಿಕ ಎಎಸ್‍ಐಗೂ ಆಲ್ಕೋಹಾಲ್ ಪರೀಕ್ಷೆ ಮಾಡುವಂತೆ ಎಸ್‍ಪಿಗೆ ಫೋನ್ ಮಾಡಿ ತಿಳಿಸಿದರು. ತಕ್ಷಣ ಸ್ಥಳಕ್ಕೆ ಬಂದ ಸಂಚಾರಿ ಠಾಣಾ ಪಿಎಸ್‍ಐ ಮಂಗಳಮ್ಮ ಎಎಸ್‍ಐ ಕಾಂತರಾಜುಗೆ ಆಲ್ಕೋಮೀಟರ್ ಮೂಲಕ ಪರೀಕ್ಷೆ ಮಾಡಿದ್ದಾರೆ. ಆಲ್ಕೋ ಮೀಟರ್ ಊದುವಲ್ಲೂ ಕಾಂತರಾಜು ಸರಿಯಾಗಿ ಊದದೇ ಸಾರ್ವಜನಿಕರಿಂದ ತರಾಟೆಗೊಳಪಟ್ಟಿದ್ದಾರೆ.
Advertisement
ಐದಾರು ಬಾರಿ ಊದಿದರೂ ಎರರ್ ಎಂದು ತೋರಿಸುತಿತ್ತು. ಬೈಕ್ ಸವಾರ ಲೋಕೇಶ್ ಹಾಗೂ ಎಎಸ್‍ಐ ಕಾಂತರಾಜು ಇಬ್ಬರಿಗೂ ಪರೀಕ್ಷೆ ನಡೆಸಿ ಇಬ್ಬರೂ ಮದ್ಯ ಕುಡಿದಿಲ್ಲ ಎಂದು ಖಾತ್ರಿಯಾದಾಗ ಪ್ರಕರಣ ಸುಖಾಂತ್ಯಗೊಂಡಿದೆ. ಆದರೆ ನಡುರಸ್ತೆಯಲ್ಲಿ ಪೊಲೀಸ್ ಅಧಿಕಾರಿ ಆಲ್ಕೋಹಾಲ್ ಪರೀಕ್ಷೆಗೊಳಪಟ್ಟು ಮುಜುಗರಕ್ಕೋಳಗಾಗಿದ್ದನ್ನು ಕಂಡು ಸಾರ್ವಜನಿಕರು ನಕ್ಕಿದ್ದಾರೆ.