ChitradurgaDistrictsKarnatakaLatestMain Post

ಪೊಲೀಸರು ಮ್ಯಾಚ್ ಫಿಕ್ಸಿಂಗ್ ಮಾಡೋದನ್ನು ಬಿಡಿ, ನಿಷ್ಠೆಯಿಂದ ಕೆಲಸ ಮಾಡಿ: ಅಲೋಕ್ ಕುಮಾರ್

ಚಿತ್ರದುರ್ಗ: ಪೊಲೀಸ್ (Police) ಠಾಣೆಗೆ ದಾಖಲಾಗುವ ಪ್ರಕರಣದ ವಿಚಾರದಲ್ಲಿ ಪೊಲೀಸರು ಮ್ಯಾಚ್ ಫಿಕ್ಸಿಂಗ್ ಮಾಡೋದನ್ನು ಬಿಟ್ಟು ನಿಷ್ಠೆಯಿಂದ ಕೆಲಸ ಮಾಡುವಂತೆ ಎಡಿಜಿಪಿ (ADGP) ಅಲೋಕ್ ಕುಮಾರ್ (Alok Kumar) ಚಿತ್ರದುರ್ಗ (Chitradurga) ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಚಿತ್ರದುರ್ಗದ ಜಿ.ಪಂ ಸಭಾಂಗಣದಲ್ಲಿ ಅಲೋಕ್ ಕುಮಾರ್ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಈ ಸಭೆಗೆ ಯಾವ ಕೇಸ್‍ಗೆ ಸಂಬಂಧಿಸಿದವರೆಲ್ಲ ಬಂದಿದ್ದಾರೆಂದು ಕೇಸ್‍ಗಳ ಲಿಸ್ಟ್ ನೀಡದ್ದಕ್ಕೆ ಎಎಸ್‍ಪಿ ಕುಮಾರಸ್ವಾಮಿಯನ್ನು ತರಾಟೆ ತೆಗೆದುಕೊಂಡರು. ಸಭೆಗೆ ಆಗಮಿಸಿದ್ದ ಬಹುತೇಕರು ಪೊಲೀಸ್ ಅಧಿಕಾರಿಗಳ ಪರವಾಗಿ ಬ್ಯಾಟಿಂಗ್ ಮಾಡ್ತಾ, ಬಹುಪರಾಕ್ ಹೇಳಿದರು. ಹೀಗಾಗಿ ಗರಂ ಆದ ಅಲೋಕ್ ಕುಮಾರ್ ಸಭೆಗಾಗಿ ಅವರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿದ್ದೀರಿ. ಇದನ್ನು ಬಿಟ್ಟು ಕೆಲಸಮಾಡಿ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬಾಲಕೃಷ್ಣ ಕಾರಿನ ಮೇಲೆ ಕಲ್ಲು ತೂರಾಟ – ಅಶ್ವಥ್ ನಾರಾಯಣ ಸಂಬಂಧಿ ಕಾರಣ ಎಂದ ಮಾಜಿ ಶಾಸಕ

ಇದಕ್ಕೂ ಮುನ್ನ ನಡೆದ ಅಹವಾಲು ಸಲ್ಲಿಕೆ ವೇಳೆ ಕೆಲ ಹೋರಾಟಗಾರರು, ರೌಡಿ ಶೀಟರ್‌ಗಳು ಪೊಲೀಸರ ಪರ ಹಾಗೂ ವಿರೋಧವಾಗಿ ಎಡಿಜಿಪಿಗೆ ವಿವಿಧ ಮನವಿ ಸಲ್ಲಿಸಿದರು. ಈ ವೇಳೆ ಕೆಲ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವಿರುದ್ಧ ದೂರು ಕೇಳಿ ಬಂದಿತ್ತು. ಸಭೆಯಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಅಲೋಕ್ ಕುಮಾರ್, ಪ್ರಕರಣಗಳಲ್ಲಿ ದೂರುದಾರರ ದೂರಿನನ್ವಯ ಸೂಕ್ತ ತನಿಖೆ ನಡೆಸಬೇಕು. ಜೊತೆಗೆ ನೊಂದವರಿಗೆ ಅಗತ್ಯ ನ್ಯಾಯ ಒದಗಿಸುವಂತೆ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡರು. ಈ ವೇಳೆ ಪೂರ್ವವಲಯ ಐಜಿಪಿ ತ್ಯಾಗರಾಜನ್, ಚಿತ್ರದುರ್ಗ ಎಸ್‍ಪಿ ಕೆ.ಪರಶುರಾಮ್ ಉಪಸ್ಥಿತರಿದ್ದರು. ಇದನ್ನೂ ಓದಿ: 132 ಕೃತ್ಯಗಳಲ್ಲಿ ಭಾಗಿಯಾಗಿದ್ದ ಬೆಳಗಾವಿಯ 12 ಆರೋಪಿಗಳು ಗಡಿಪಾರು

Live Tv

Leave a Reply

Your email address will not be published. Required fields are marked *

Back to top button