ಉಡುಪಿ: ಸೀಟು ಬೆಲ್ಟ್ ಹಾಕಿದ್ದರೂ ಹಾಕಿಲ್ಲ ಎಂದು ಮಹಿಳೆಯಿಂದ 500 ರೂ. ಪೀಕಿಸಲು ಹೋಗಿ ಪೊಲೀಸರು ಪೀಕಲಾಟಕ್ಕೆ ಒಳಗಾದ ಘಟನೆ ಉಡುಪಿ ಜಿಲ್ಲೆಯ ಹೆಮ್ಮಾಡಿಯಲ್ಲಿ ನಡೆದಿದೆ.
ಕುಂದಾಪುರದಲ್ಲಿ ಹೈವೇ ಪೆಟ್ರೋಲ್ ಪೊಲೀಸರು ಮಹಿಳೆಯ ಕಾರು ಬರುತ್ತಿದ್ದಂತೆ ದೂರದಲ್ಲೇ ನಿಲ್ಲಿಸುವಂತೆ ಸೂಚನೆ ನೀಡಿದರು. ಬಳಿಕ ಪೊಲೀಸರು ನೀವು ಸೀಟ್ ಬೆಲ್ಟ್ ಹಾಕಿಲ್ಲ 500 ರೂ. ಕೊಡಿ ಎಂದು ಹಣ ಪೀಕಿಸಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
Advertisement
Advertisement
ಈ ಹಿಂದೆ ಬಹಳಷ್ಟು ಬಾರಿ ಪೊಲೀಸರ ಹಗಲು ದರೋಡೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮಹಿಳೆ ಶಾಂತಿ ಫುಟಾರ್ಡೋ ಪೊಲೀಸರಿಗೆ ರೇಗಾಡಿದ ವಿಡಿಯೋವನ್ನು ತಾನೇ ಚಿತ್ರೀಕರಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ತಾನೇ ಶೇರ್ ಮಾಡಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸರು ಸ್ಪಷ್ಟನೆ ನೀಡಿಲ್ಲ.