ಬೆಂಗಳೂರು: ಪೊಲೀಸರು ಇತ್ತೀಚೆಗೆ ನಗರದ ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ಮೂಲಕ ಎಚ್ಚರಿಕೆಯನ್ನ ನೀಡಿದ್ದರು. ಇದರಿಂದ ಎಚ್ಚೆತ್ತ ನೆಲಮಂಗಲ ವ್ಯಾಪ್ತಿಯ ಪೊಲೀಸರು ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಗಳಿಗೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವ ಶಂಕರ್ ನೇತೃತ್ವದಲ್ಲಿ ರೌಡಿ ಪರೇಡ್ ಮಾಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರೌಡಿ ಪರೇಡ್ ನಲ್ಲಿ ಎಸ್.ಪಿ ಖಡಕ್ ವಾರ್ನಿಂಗ್ ಗೆ ಪ್ರತಿಯೊಬ್ಬ ರೌಡಿಶೀಟರ್ ಗಳು ಭಾಗಿಯಾಗಿದ್ದರು. ಒಟ್ಟು 166 ಜನ ರೌಡಿ ಶೀಟರ್ ಗಳಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಹಿಂದಿನ ನೆಲಮಂಗಲ ಆಗದಂತೆ ಹಾಗೂ ಚಾಲ್ತಿಯಲ್ಲಿರುವ ರೌಡಿಶೀಟರ್ ಗಳು ಮತ್ತೆ ಜನರಿಗೆ ಧಮ್ಕಿ ಹಾಕಿ ಹಫ್ತ ವಸೂಲಿ, ರಿಯಲ್ ಎಸ್ಟೇಟ್ ದಂದೆ ಇನ್ನಿತರ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವುದಕ್ಕೆ ಖಡಕ್ ವಾರ್ನಿಂಗ್ ನೀಡಿದ್ದೇವೆ. ಹೈವೇ ದರೋಡೆ ಹಾಗೂ ಇತ್ತಿಚೇಗೆ ನಟ ವಿನೋದ್ ರಾಜ್‍ರಿಂದ ಒಂದು ಲಕ್ಷ ಹಣ ದೋಚಿದ ಪ್ರಕರಣಕ್ಕೆ ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಎಸ್.ಪಿ ಶಿವಶಂಕರ್ ತಿಳಿಸಿದರು.
ಇತ್ತೀಚೆಗೆ ಬೆಂಗಳೂರಿಗೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅವರು ನೇಮಕಗೊಂಡಿದ್ದರು. ನೇಮಕವಾದ ಬಳಿಕ ಬಾರ್ ಆಂಡ್ ರೆಸ್ಟೊರೆಂಟ್, ಜೂಜು ಅಡ್ಡೆ ಮತ್ತು ಪಬ್ ಮೇಲೆ ದಾಳಿ ಮಾಡಿ ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಚಟುವಟಿಕೆಗಳಿಗೆ ಬ್ರೇಕ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿ ಅವರಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದು ಎಚ್ಚರಿಕೆಯನ್ನು ಕೂಡ ಕೊಡುತ್ತಿದ್ದಾರೆ. ಅಲೋಕ್ ಕುಮಾರ್ ಅವರ ಕೆಲಸ ಕಾರ್ಯವನ್ನು ಮೆಚ್ಚಿ ಈಗ ನೆಲಮಂಗಲ ಪೊಲೀಸರು ರೌಡಿಗಳನ್ನು ಕರೆಸಿ ಪರೇಡ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv