Connect with us

Bollywood

ಪೊಲೀಸರ ಕೈಗೆ ಸಿಕ್ಕಿ ಬಿದ್ದ ದೇಸಿ ಗರ್ಲ್- 7 ವರ್ಷ ಶಿಕ್ಷೆ

Published

on

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಸದಾ ಸಾಮಾಜಿಕ ಜಾಲತಾಣಗಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದರು. ಇದೀಗ ಮಹಾರಾಷ್ಟ್ರ ಪೊಲೀಸರ ಕೈಗೆ ಪ್ರಿಯಾಂಕ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದು, ಪೊಲೀಸರು ಐಪಿಸಿ ಸೆಕ್ಷನ್ 393ರ ಅಡಿಯಲ್ಲಿ ಏಳು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.

ಹೌದು.. ನಟಿ ಪ್ರಿಯಾಂಕಾ ಅವರಿಗೆ ಪೊಲೀಸರು ಏಳು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವುದಾಗಿ ಹೇಳಿದ್ದಾರೆ. ಆದರೆ ನಿಜ ಜೀವನದಲ್ಲಿ ಅಲ್ಲ. ಬದಲಿಗೆ ಪೊಲೀಸರು ಅವರ ಸಿನಿಮಾ ನೋಡಿ ಹೇಳಿದ್ದಾರೆ. ಅಸಲಿಗೆ ಏನಾಯಿತೆಂದರೆ ಪ್ರಿಯಾಂಕ ಅಭಿನಯದ ‘ಸ್ಕೈ ಈಸ್ ಪಿಂಕ್’ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ.

ಸಾಕಷ್ಟು ಕುತೂಹಲ ಮೂಡಿಸಿರುವ ಈ ಟ್ರೈಲರ್ ನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಮಗಳ ಚಿಕಿತ್ಸೆಗಾಗಿ, ಸದ್ಯದಲ್ಲೇ ನಾವು ಬ್ಯಾಂಕ್ ದರೋಡೆ ಮಾಡೋಣ ಎಂದು ಪ್ರಿಯಾಂಕ ಫರಾನ್ ಅಖ್ತರ್‍ಗೆ ಹೇಳುವ ದೃಶ್ಯವಿದೆ. ಈ ಒಂದು ದೃಶ್ಯದ ಸ್ಕ್ರೀನ್ ಶಾಟ್ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಫೋಟೋ ವೈರಲ್ ಆಗುತ್ತಿದೆ.

ಈ ಫೋಟೋವನ್ನು ನೋಡಿದ ಮಹಾರಾಷ್ಟ್ರ ಪೊಲೀಸರು ಈ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ “ಈ ಘಟನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 393ರ ಅಡಿಯಲ್ಲಿ 7 ವರ್ಷ ಶಿಕ್ಷೆ ಹಾಗೂ ದಂಡವನ್ನು ಕಟ್ಟಬೇಕು” ಎಂದು ಟ್ವೀಟ್ ಮಾಡಿ ಪ್ರಿಯಾಂಕ ಅವರ ಕಾಲೆಳೆದಿದ್ದಾರೆ. ಇತ್ತ ಪ್ರಿಯಾಂಕಾ ಅವರು ಕೂಡ ಪೊಲೀಸರ ಟ್ವೀಟ್ ನೋಡಿ, “ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದೇವೆ. ಆದ್ದರಿಂದ ನಾನು ಪ್ಲಾನ್ ಬಿ ಆಕ್ಟಿವೇಟ್ ಮಾಡುವ ಸಮಯ” ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಸಿನಿಮಾದಲ್ಲಿ ಪ್ರಿಯಾಂಕ ಜೊತೆಗೆ ಫರಾನ್ ಅಖ್ತರ್ ಹಾಗೂ ಝೈರಾ ವಾಸಿಂ ನಟಿಸಿದ್ದಾರೆ. ಪೊಲೀಸರು ಮತ್ತು ಪ್ರಿಯಾಂಕಾ ಅವರ ಟ್ವೀಟ್‍ಗಳನ್ನು ನೋಡಿ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *