ವಿಜಯಪುರ: ಅಪ್ರಾಪ್ತ ಬಾಲಕನ ಮರ್ಮಾಂಗಕ್ಕೆ ಪೊಲೀಸರು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಲು ಯತ್ನಿಸಿದ ಆಘಾತಕಾರಿ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ಗ್ಯಾಂಗಬಾಡಿ ನಿವಾಸಿ ಅಪ್ರಾಪ್ತ ಬಾಲಕನ ಮೇಲೆ ನಗರದ ಗಾಂಧಿಚೌಕ ಪೊಲೀಸ್ ಠಾಣೆಯ ಪಿಎಸ್‍ಐ ಆರೀಫ್ ಮುಷರಿಪ್ ಸೇರಿದಂತೆ ಅದೇ ಠಾಣೆಯ ಮೂವರು ಪೊಲೀಸ್ ಪೇದೆಗಳು ಈ ಕೃತ್ಯ ಎಸಗಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಅಪ್ರಾಪ್ತ ಸ್ನೇಹಿತ ಚಿನ್ನಾಭರಣ ಕಳ್ಳತನ ಮಾಡಿ ಈತನ ಕೈಗೆ ನೀಡಿದ್ದಾನೆ. ಆದರೆ ಆ ಕಳ್ಳತನ ಬಾಲಕನೇ ಮಾಡಿದ್ದಾನೆಂದು ಆರೋಪಿಸಿ ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಮರ್ಮಾಂಗಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಲು ಮುಂದಾಗಿದ್ದಾರೆ.
ಈ ಘಟನೆಯಿಂದ ಭಯಭೀತನಾದ ಬಾಲಕನಿಗೆ ಚಳಿಜ್ವರ ಬಂದಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಳ್ಳತನಕ್ಕೆ ಸಹಕರಿಸಿದ್ದಕ್ಕಾಗಿ ಬಾಲಕನನ್ನು ಕರೆಸಿ ವಿಚಾರಣೆ ಮಾಡಿದ್ದು ಸರಿ. ಆದರೆ ಈ ರೀತಿ ಮರ್ಮಾಂಗಕ್ಕೆ ಪೆಟ್ರೋಲ್ ಹಾಕಿ ಸುಡಲು ಹೋಗಿದ್ದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.