ರಾಮನಗರ: ಸಮಾಜದ ಸ್ವಾಸ್ಥ್ಯ ಕಾಪಾಡಲು ಹಾಗೂ ಜನರಿಗೆ ರಕ್ಷಣೆ ನೀಡಲು ಪೊಲೀಸ್ (Police) ಇಲಾಖೆಗೆ ಸೇರುವ ಪ್ರಶಿಕ್ಷಣಾರ್ಥಿಗಳಿಗೆ ಇದೀಗ ಅಭದ್ರತೆ ಕಾಡುತ್ತಿದೆ. ಪೊಲೀಸ್ ತರಬೇತಿ ಶಾಲೆಯ (Police Training School) ಪ್ರಾಂಶುಪಾಲರೇ ಪ್ರಶಿಕ್ಷಣಾರ್ಥಿಗಳನ್ನು ಬೆದರಿಸಿ ಹಣ ವಸೂಲಿ ಮಾಡ್ತಿದ್ದಾರೆಂಬ ಆರೋಪ (Alligation) ಕೇಳಿಬಂದಿದೆ.
ಚನ್ನಪಟ್ಟಣ (Channapatna) ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ವಿ.ಶೈಲೇಂದ್ರ ವಿರುದ್ಧ ಇಂತಹದ್ದೊಂದು ಅರೋಪ ಕೇಳಿಬಂದಿದೆ. ತರಬೇತಿ ಶಾಲೆಯಲ್ಲಿ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ಅಭದ್ರತೆ ಕಾಡುತ್ತಿದ್ದು, ಪ್ರಾಂಶುಪಾಲರ ನಡವಳಿಕೆಯಿಂದ ಆತಂಕದ ವಾತಾವರಣ ನಿರ್ಮಾಣ ಆಗಿದೆ ಪ್ರಶಿಕ್ಷಣಾರ್ಥಿಗಳು ಪಬ್ಲಿಕ್ ಟಿವಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ. ಪ್ರಾಂಶುಪಾಲರ ವಿಶ್ರಾಂತಿ ಗೃಹದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ತರಬೇತಿ ಶಾಲೆಯ ವಿಶ್ರಾಂತಿ ಗೃಹವನ್ನು ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ. ಇದಕ್ಕೆ ತರಬೇತಿ ಶಾಲೆಯ ಕರಾಟೆ ಮಾಸ್ಟರ್ ದಿಲೀಪ್ ಮತ್ತು ಮೈಸೂರಿನ ಕುಮಾರ್ ಎಂಬುವವರು ಸಾಥ್ ನೀಡ್ತಿದ್ದಾರೆ ಎಂದು ಮಹಿಳಾ ಪ್ರಶಿಕ್ಷಣಾರ್ಥಿಗಳು ಪಬ್ಲಿಕ್ ಟಿವಿಗೆ ಪತ್ರ ಬರೆದು ಅಸಾಹಯಕತೆ ತೋಡಿಕೊಂಡಿದ್ದಾರೆ. ಇದನ್ನೂ ಓದಿ: PHD ಸಂಶೋಧಕನನ್ನ ಕೊಂದು ಕಾಲುವೆಗೆ ಎಸೆದಿದ್ದ ಸೈಕೋ ಕಿಲ್ಲರ್ – 2 ತಿಂಗಳ ನಂತರ ಕೇಸ್ ಪತ್ತೆ
ಅಲ್ಲದೇ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳ ಬೆದರಿಸಿ ಪ್ರಾಂಶುಪಾಲ ವಿ.ಶೈಲೇಂದರ್ ಹಣ ವಸೂಲಿ ಮಾಡಿತ್ತಿರುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರಶಿಕ್ಷಣಾರ್ಥಿಗಳಿಗೆ ರಜೆ ನೀಡಲು ಹಣ ನೀಡಬೇಕಂತೆ. ತರಬೇತಿ ಪಡೆಯುತ್ತಿರುವ ಮಾಜಿ ಸೈನಿಕರು ತಿಂಗಳಿಗೆ ಎರಡು ಬಾಟಲ್ ಮದ್ಯ ಹಾಗೂ 3,500 ರೂ. ಹಣ ನೀಡುವಂತೆಯೂ ತಾಕೀತು ಮಾಡುತ್ತಿದ್ದಾರೆ. ಮುಖ್ಯಪೇದೆಗಳಾದ ನಾಗೇಶ್ ಮತ್ತು ನಟರಾಜ್ ಎಂಬುವವರನ್ನು ಬಳಸಿಕೊಂಡು ಪ್ರಾಂಶುಪಾಲರು ಭ್ರಷ್ಟಾಚಾರ ಮಾಡ್ತಿದ್ದಾರೆಂದು ಪ್ರಶಿಕ್ಷಣಾರ್ಥಿಗಳು ಪತ್ರದ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಗನಿಂದಲೇ ತಾಯಿಗೆ ಮಹಾಮೋಸ – ಮಂಚದ ಮೇಲೆ ಮಲಗಿಸಿಕೊಂಡು ಕೋರ್ಟ್‍ಗೆ ಕರೆತಂದ ಮಗಳು
ಪೊಲೀಸ್ ಇಲಾಖೆ ಸೇರುವ ಯುವ ಸಮೂಹಕ್ಕೆ ನೈತಿಕ ಪಾಠ ಮಾಡಬೇಕಾದ ಪ್ರಾಂಶುಪಾಲರೇ ಈ ರೀತಿಯ ನಡವಳಿಕೆ ಪ್ರದರ್ಶನ ಮಾಡ್ತಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ವ್ಯವಸ್ಥೆಯಲ್ಲಿ ತರಬೇತಿ ಪಡೆಯುವ ಪ್ರಶಿಕ್ಷಣಾರ್ಥಿಗಳು ಸಮಾಜಕ್ಕೆ ಯಾವ ರೀತಿ ಕೊಡುಗೆ ನೀಡಬಹುದು ಎಂಬ ಪ್ರಶ್ನೆ ಎದುರಾಗಿದೆ.