ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಬೆನ್ನಲ್ಲೇ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರಿಗೆ ಕೆಲ ಸಂಘಟನೆಗಳಿಂದ ಬೆದರಿಕೆ ಕರೆಗಳು ಬಂದಿದ್ದು, ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ.
ಪಠ್ಯಗಳ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಅನೇಕ ಸಂಘಟನೆಗಳು ರೋಹಿತ್ ಚಕ್ರತೀರ್ಥರಿಗೆ ಬೆದರಿಕೆ ಹಾಕಿವೆ. ಸಂಘಟನಾಕಾರರು ಫೋನ್ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ರೋಹಿತ್ ಚಕ್ರತೀರ್ಥ ನಿವಾಸಕ್ಕೆ ಬಿಗಿ ಭದ್ರತೆ ನೀಡಲಾಗಿದೆ. ಇದನ್ನೂ ಓದಿ: ಅಂಬೇಡ್ಕರ್ ಮರೆತಿದ್ದು ಕಾಂಗ್ರೆಸ್ ಹೊರತು ನಾವಲ್ಲ: ಬಿಜೆಪಿ ತಿರುಗೇಟು
Advertisement
Advertisement
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯ ಪುಸ್ತಕದಲ್ಲಿ 7ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ ತೆಗೆದಿದ್ದಾರೆ. 9ನೇ ತರಗತಿ ಪುಸ್ತಕದಲ್ಲಿ `ಸಂವಿಧಾನ ಶಿಲ್ಪಿ’ ಎಂಬ ಬಿರುದನ್ನು ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ 10ನೇ ತರಗತಿಯಲ್ಲಿ ಅಂಬೇಡ್ಕರ್ ಪಠ್ಯ ಇರುವುದಾಗಿ ಫೋಟೋವನ್ನು ಟ್ವೀಟ್ ಮಾಡಿತ್ತು.
Advertisement
ಹತ್ತನೇ ತರಗತಿಯ ಕನ್ನಡ ಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಪಠ್ಯವೇ ಇರಲಿಲ್ಲ.
ನಮ್ಮ ಸರ್ಕಾರ ಅಂಬೇಡ್ಕರ್ ಅವರ ಪಠ್ಯವನ್ನು ಸೇರಿಸಿ ಕಾಂಗ್ರೆಸ್ ಮಾಡಿದ ತಪ್ಪನ್ನು ಅಳಿಸಿ ಹಾಕಿದೆ.
ಸಂವಿಧಾನ ಪಿತಾಮಹರನ್ನು ಕಾಂಗ್ರೆಸ್ ಮರೆತಿತ್ತೇ ಹೊರತು, ನಾವಲ್ಲ.#ದಲಿತವಿರೋಧಿಕಾಂಗ್ರೆಸ್ pic.twitter.com/6K4TcJ4IcC
— BJP Karnataka (@BJP4Karnataka) June 6, 2022
Advertisement
ನಿನ್ನೆ 7ನೇ ತರಗತಿ ಪಠ್ಯಪುಸ್ತಕದ ಕರ್ನಾಟಕ ಏಕೀಕರಣ ಅಧ್ಯಾಯದಲ್ಲಿ ಕುವೆಂಪು ಅವರ ಫೋಟೋ ಕೈಬಿಡಲಾಗಿದೆ ಎಂದು ಅನೇಕ ಸಂಘನಾಕಾರರು ಹಾಗೂ ಕುವೆಂಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ
ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿರುವ ಹೊತ್ತಿನಲ್ಲೇ ಬೆದರಿಕೆಯ ಕರೆಗಳು ಬರುತ್ತಿದೆ. ಈ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ನಿವಾಸಕ್ಕೆ ಬಿಗಿ ಭದ್ರತೆ ನೀಡಲಾಗಿದೆ.