ಮಂಡ್ಯ: ಜಿಲ್ಲೆಯಾದ್ಯಾಂತ ಕೊರೊನಾ ವೈರಸ್‍ನ ವದಂತಿ ಹಬ್ಬಿಸಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದ ದಿಲೀಪ್ ತನ್ನ ಸ್ನೇಹಿತ ಜನಾರ್ದನ್‍ಗೆ ಕೊರೊನಾ ವೈರಸ್ ಇದೆ ಎಂದು ವದಂತಿ ಹಬ್ಬಿಸಿದ್ದನು. ಕೇನ್ ಮಾಸ್ಟರ್ ಆ್ಯಪ್‍ನಲ್ಲಿ ಎಡಿಟಿಂಗ್ ಮಾಡಿ ಪಾಂಡಪುರ ತಾಲೂಕಿನ ವಿಜಯ ಕಾಲೇಜಿನ ವಿದ್ಯಾರ್ಥಿಗೆ ಕೊರೊನಾ ಸೋಂಕು ತಗುಲಿದೆ ಎಂದು ನ್ಯೂಸ್ ಚಾನಲ್‍ನ ಬ್ರೇಕಿಂಗ್ ರೀತಿ ಮಾಡಿದ್ದಾನೆ. ನಂತರ ಅದನ್ನು ತನ್ನ ವಾಟ್ಸಪ್‍ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾನೆ.
Advertisement
Advertisement
ಈ ವೇಳೆ ಆ ಪೋಸ್ಟ್‌ನ್ನು ದಿಲೀಪ್‍ನ ಹಲವು ಸ್ನೇಹಿತರು ನೋಡಿದ್ದಾರೆ. ಬಳಿಕ ಜನಾರ್ದನ್ ದಿಲೀಪ್‍ಗೆ ಫೋನ್ ಮಾಡಿ ಬೈಯ್ದ ಬಳಿಕ ಆ ಪೋಸ್ಟ್‌ನ್ನು ಯುವಕ ಡಿಲೀಟ್ ಮಾಡಿದ್ದಾನೆ. ಆದರೆ ದಿಲೀಪ್ ಕ್ರಿಯೇಟ್ ಮಾಡಿದ್ದ ಆ ಪೋಸ್ಟ್ ವಾಟ್ಸಪ್ ಹಾಗೂ ಫೇಸ್‍ಬುಕ್ ಗ್ರೂಪ್‍ಗಳಲ್ಲಿ ಹರಿದಾಡಿದೆ. ಬಳಿಕ ಇದರ ಬಗ್ಗೆ ಗಂಭೀರವಾರಿ ಪರಿಗಣಿಸಿದ ಪಾಂಡಪುರದ ಆರೋಗ್ಯಾಧಿಕಾರಿ ಡಾ. ಅರವಿಂದ್ ಪಾಂಡಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Advertisement
ದೂರಿನ ಅನ್ವಯ ಪೊಲೀಸರು ವಿಚಾರಣೆ ನಡೆಸಿದ ವೇಳೆ ದಿಲೀಪ್ ಈ ವದಂತಿಯ ಕೃತ್ಯವನ್ನು ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ವದಂತಿ ಸೃಷ್ಟಿಸಿದ ದಿಲೀಪ್ ಈಗ ಪೊಲೀಸರ ವಶದಲ್ಲಿದ್ದು, ನಾನು ಜನಾರ್ದನ್‍ನನ್ನು ಆಟವಾಡಿಸಲು ಹೀಗೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.