ಬೆಂಗಳೂರು: ನೀಲಸಂದ್ರದ ಆಂಜನೇಯ ದೇಗುಲದ ಮೈಕ್‍ನಲ್ಲಿ ಓಂಕಾರ ನಾದ ಹನುಮಾನ್ ಚಾಲೀಸ್ ಹಾಕಲು ಶ್ರೀರಾಮ ಸೇನೆ ಸಜ್ಜುಗೊಂಡಿದ್ದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಜಾನ್ ವಿರೋಧಿಸಿ ಸುಪ್ರಭಾತ ಅಭಿಯಾನವನ್ನು ನಡೆಸುತ್ತಿದ್ದ ಹಿಂದೂ ಕಾರ್ಯಕರ್ತರನ್ನು ಪೊಲೀಸರು ತಡೆಯುವ ಪ್ರಯತ್ನ ಮಾಡಿದರು. ಈ ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಹಿಂದೂ ಕಾರ್ಯಕರ್ತರು ಗಲಾಟೆ ನಡೆಸಿದ್ದಾರೆ. ದರ್ಶನ ಮಾಡುತ್ತೇವೆ ಬಿಡಿ ಎಂದು ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದಾರೆ.
Advertisement
Advertisement
ಆದರೆ ಅವಕಾಶ ಕೊಡದ ಪೊಲೀಸರು ಯಾವ ಅವಕಾಶವನ್ನು ಕೊಡಲ್ಲ ಎಂದು ತಿಳಿಸಿದ್ದಾರೆ. ಆಗ ಹಿಂದೂ ಕಾರ್ಯಕರ್ತರು ಧಾರ್ಮಿಕ ಹಕ್ಕು ಇದೆ ಎಂದು ವಾದಿಸಿದ್ದಾರೆ. ಆದರೂ ಅಂಬೇಡ್ಕರ್ ಸರ್ಕಲ್ ನೀಲಸಂದ್ರ ದೇಗುಲದಿಂದ ಅರ್ಧ ಕಿಮೀ ದೂರದಲ್ಲೇ ಪೊಲೀಸರು ಹಿಂದೂ ಕಾರ್ಯಕರ್ತರನ್ನು ತಡೆದಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ: ಪ್ರಮೋದ್ ಮುತಾಲಿಕ್
Advertisement
Advertisement
ನಿಮಗೆ ತಾಕತ್ತಿದ್ದರೇ ಮಸೀದಿಗಳ ಆಜಾನ್ ತಡೆಯಿರಿ. ನಮ್ಮನ್ನು ತಡೆಯಬೇಡಿ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಜೊತೆಗೆ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಸುಮಾರು ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದ ಅಶೋಕ ನಗರ ಪೊಲೀಸರು ನಂತರ ಕಾರ್ಯಕರ್ತರನ್ನು ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ: 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್