ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ಆರೋಪಿ ಆದಿತ್ಯ ರಾವ್ ನನ್ನು ಮಂಗಳೂರು ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ.
ಆರೋಪಿ ಆದಿತ್ಯ ರಾವ್ ಇಂದು ಶರಣಾದ ಕೂಡಲೇ ಪೊಲೀಸರು, ಆತನನ್ನ ಹಲಸೂರು ಗೇಟ್ ಠಾಣೆಗೆ ಕೆರೆದೊಯ್ದು ವಿಚಾರಣೆಗೆ ಒಳಪಡಿಸಿದರು. ಮಧ್ಯಾಹ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಈ ವೇಳೆ ಆದಿತ್ಯ ರಾವ್‍ನನ್ನ ವಶಕ್ಕೆ ಪಡೆಯಲು ಮಂಗಳೂರು ಪೊಲೀಸರು ವಿಮಾನದಲ್ಲಿ ಬೆಂಗಳೂರಿಗೆ ಬಂದರು. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಆದಿತ್ಯನನ್ನ ಮಂಗಳೂರು ಪೊಲೀಸರು (ಬೆಳ್ಳಿಯಪ್ಪ ತಂಡ) ಸ್ವಲ್ಪ ಹೊತ್ತು ವಿಚಾರಣೆ ನಡೆಸಿದರು. ಇದನ್ನೂ ಓದಿ; ಹರಸಾಹಸ ಪಟ್ಟು 2018ರಲ್ಲಿ ಆದಿತ್ಯನನ್ನು ಹಿಡಿದಿದ್ರು ಬೆಂಗ್ಳೂರು ಪೊಲೀಸರು
ಇತ್ತ ಆರೋಪಿಯ ಸ್ವ-ಇಚ್ಛಾ ಹೇಳಿಕೆ ಪರಿಶೀಲನೆ ಮಾಡಿದ ಒಂದನೇ ಎಸಿಎಂಎಂ ನ್ಯಾಯಾಧೀಶ ಜಗದೀಶ್, ಬಳಿಕ ಟ್ರಾನ್ಸಿಟ್ ವಾರೆಂಟ್ ಅಡಿಯಲ್ಲಿ ಮಂಗಳೂರಿಗೆ ಕರೆದೊಯ್ಯಲು ಒಪ್ಪಿಗೆ ನೀಡಿದರು. ಮಂಗಳೂರು 6 ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಒಂದನೇ ಎಸಿಎಂಎಂ ನ್ಯಾಯಾಧೀಶರು ಸೂಚಿಸಿದ್ದಾರೆ. ಇದನ್ನೂ ಓದಿ: I Am Fit And Fine- ವೈದ್ಯರ ಬಳಿ ಆದಿತ್ಯ ರಾವ್ ಡೈಲಾಗ್
ಇದೇ ವೇಳೆ ನ್ಯಾಯಾಧೀಶರು ಆರೋಪಿ ನೀಡಿದ್ದ ಮೂರೂವರೆ ಪುಟಗಳ ಸ್ವ-ಇಚ್ಛಾ ಹೇಳಿಕೆಯನ್ನು ಪರಿಶೀಲನೆ ಮಾಡಿದರು. ನಾಳೆ ಕೋರ್ಟ್ ಅವಧಿ ಮುಗಿಯುವುದರೊಳಗೆ ಆರೋಪಿ ಆದಿತ್ಯನನ್ನು ಮಂಗಳೂರು ಎಸಿಎಂಎಂ ಕೋರ್ಟಿಗೆ ಹಾಜರುಪಡಿಸಬೇಕು. ಇದನ್ನೂ ಓದಿ: ತಾಯಿಗೆ ಕ್ಯಾನ್ಸರ್ ಆಗಿದ್ರೂ ಸಹಾಯಕ್ಕೆ ಬಂದಿರಲಿಲ್ಲ ಆದಿತ್ಯ ರಾವ್!
ಟ್ರಾನ್ಸಿಟ್ ವಾರೆಂಟ್ ಆ ಕೋರ್ಟಿಗೆ ಹಾಜರಾಗುವವರೆಗೆ ವ್ಯಾಲ್ಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ 7.15ಕ್ಕೆ ಬಾಂಬ್ ಆರೋಪಿ ಆದಿತ್ಯ ರಾವ್ ನನ್ನು ಪೊಲೀಸರು ಬೆಂಗಳೂರಿನಿಂದ ಮಂಗಳೂರಿಗೆ ಸ್ಪೈಸ್ ಜೆಟ್ ವಿಮಾನದ ಮೂಲಕ ಕರೆದುಕೊಂಡು ಹೋಗಲಿದ್ದಾರೆ. ಈಗಾಗಲೇ ಆರೋಪಿಯನ್ನು ಕರೆದೊಯ್ಯಲು ಮಂಗಳೂರಿನ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಬೆಂಗಳೂರಿನಲ್ಲಿದ್ದು, ಸದ್ಯ ಏರ್ ಪೋರ್ಟ್ ತಲುಪಿದ್ದಾರೆ.