– ಹತ್ಯೆಗೈದ ಇಬ್ಬರ ಗುರುತು ಪತ್ತೆ
ಜೈಪುರ: ರಜಪೂತ್ ಕರ್ಣಿ ಸೇನಾ ಮುಖ್ಯಸ್ಥ ಸುಖ್ ದೇವ್ ಸಿಂಗ್ ಗೋಮೆದಿ (Karni Sena chief Sukhdev Singh Gogamedi) ಬರ್ಬರವಾಗಿ ಹತ್ಯೆಗೈದ ನಾಲ್ವರಲ್ಲಿ ಇಬ್ಬರ ಗುರುತು ಪತ್ತೆಯಾಗಿದೆ.
ಆರೋಪಿಗಳನ್ನು ಮಕ್ರಾನಾ ನಾಗೌರ್ ಮೂಲದ ರೋಹಿತ್ ರಾಥೋಡ್ ಹಾಗೂ ಹರಿಯಾಣದ ಮಹೇಂದ್ರಗಾತ್ ಮೂಲದ ನಿತಿನ್ ಫೌಜಿ ಎಂದು ಗುರುತಿಸಲಾಗಿದೆ. ಆರೋಪಿಗಳಾದ ನವೀನ್ ಶೇಖಾವತ್, ರೋಹಿತ್ ರಾಥೋಡ್ ಮತ್ತು ನಿತಿನ್ ಫೌಜಿ ಈ ಮೂವರು ಮದುವೆ ಕಾರ್ಡ್ ನೀಡುವ ನೆಪದಲ್ಲಿ ಕರ್ಣಿ ಸೇನಾ ಮುಖ್ಯಸ್ಥರ ಮನೆಗೆ ತೆರಳಿ ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಸುಖ್ ದೇವ್ ಸಿಂಗ್ ಹತ್ಯೆಗಾಗಿ ಆರೋಪಿ ನವೀನ್ ಮೂರು ದಿನಗಳ ಹಿಂದೆ ದಿನಕ್ಕೆ 5,000 ರೂ. ನಂತೆ ಎಸ್‍ಯುವಿ ಕಾರನ್ನು ಬಾಡಿಗೆಗೆ ತೆಗೆದುಕೊಂಡಿದ್ದ. ಆರೋಪಿಗಳು ಕಾರನ್ನು ಗೋಮೆದಿ ಅವರ ನಿವಾಸದಲ್ಲಿ ಬಿಟ್ಟು ಹೋಗಿದ್ದರು. ಕಾರಿನಲ್ಲಿ ಮದ್ಯದ ಬಾಟ್ಲಿಗಳು ಪತ್ತೆಯಾಗಿವೆ ಎಂದು ಮೂಲಗಳು ಖಚಿತಪಡಿಸಿವೆ. ಇದನ್ನೂ ಓದಿ: ರಜಪೂತ್ ಕರ್ಣಿ ಸೇನಾ ಮುಖ್ಯಸ್ಥನ ಹಣೆಗೆ ಗುಂಡಿಟ್ಟು ಹತ್ಯೆ – ರೊಚ್ಚಿಗೆದ್ದ ಬೆಂಬಲಿಗರಿಂದ ರಾಜಸ್ಥಾನ ಬಂದ್‌ಗೆ ಕರೆ
ಜಮೀನು ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಬ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ, ಸುಖದೇವ್ ಸಿಂಗ್ ಗೋಮೆದಿಯವರು ರೋಹಿತ್ ಗೋದಾರಾ ಅವರ ಭೂ ವಿವಾದಗಳಲ್ಲಿ ಭಾಗಿಯಾಗಿದ್ದರು.
ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯನಾಗಿದ್ದು, ಕರ್ಣಿ ಸೇನಾ ಮುಖ್ಯಸ್ಥರ ಕೊಲೆಯ ನಂತರ ಹತ್ಯೆಯ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಇದಾಗ್ಯೂ ಪೊಲೀಸರು ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.
ಸುಖ್‍ದೇವ್ ಸಿಂಗ್ ಕೊಲೆ: ಮಂಗಳವಾರ ಹಾಡಹಗಲೇ ಕರ್ಣಿ ಸೇನಾ ಮುಖ್ಯಸ್ಥನ ಕೊಲೆಯಾಗಿತ್ತು. ನಾಲ್ವರು ಏಕಾಏಕಿ ಮನೆಗೆ ನುಗ್ಗಿ ಸುಖ್ ದೇವ್ ಸಿಂಗ್ ಅವರನ್ನು ಶೂಟೌಟ್ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದರು. ಅಂತೆಯೇ ನಡೆದ ನಡೆದ ಸುತ್ತಮುತ್ತಲಿರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದರು. ಇತ್ತ ದುಷ್ಕರ್ಮಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗೋಮೆದಿಯವರ ಭದ್ರತಾ ಸಿಬ್ಬಂದಿಯೊಬ್ಬರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದರು.