ಚಾಮರಾಜನಗರ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಾಲ್ಯ ವಿವಾಹ ಮತ್ತು ಅಪ್ರಾಪ್ತ ಬಾಲಕಿ ನಿಶ್ಚಿತಾರ್ಥಕ್ಕೆ ತಡೆ ನೀಡಲಾಗಿದೆ.
ಪ್ರಕರಣ 1
ಚಾಮರಾಜನಗರದ ಎಪಿ ಮೊಹಲ್ಲಾದಲ್ಲಿ ಅಪ್ರಾಪ್ತ ಬಾಲಕಿಯ ವಿವಾಹ ನಡೆಯುತ್ತಿತ್ತು. ಸ್ಥಳಕ್ಕೆ ಆಗಮಿಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಪೊಲೀಸರು ಬಾಲ್ಯ ವಿವಾಹಕ್ಕೆ ತಡೆ ನೀಡಿದ್ದಾರೆ.
ಪ್ರಕರಣ 2
ಚಾಮರಾಜನಗರ ತಾಲೂಕು ಬಿಸಲವಾಡಿ ಗ್ರಾಮದಲ್ಲಿ ಅಪ್ರಾಪ್ತೆಯ ನಿಶ್ಚಿತಾರ್ಥ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ಹೋಗಿತ್ತು. 17 ವರ್ಷದ ಬಾಲಕಿಗೆ ಯುವಕನೊಂದಿಗೆ ನಿಶ್ಚಿತಾರ್ಥ ಸಮಾರಂಭ ನಡೆಯುತ್ತಿತ್ತು. ದೂರು ಆಧರಿಸಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ನಿಶ್ಚಿತಾರ್ಥಕ್ಕೆ ತಡೆ ನೀಡಿದ್ದಾರೆ.
ಎರಡೂ ಕಡೆ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಪೋಷಕರಿಂದ ಅಧಿಕಾರಿಗಳು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ವಿಚಾರಣೆಗೆ ಹಾಜರಾಗುವಂತೆ ಪೋಷಕರಿಗೆ ನೋಟಿಸ್ ನೀಡಿದ್ದಾರೆ.