ಬೆಂಗಳೂರು: ನಟ ಧರ್ಮ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸದಂತೆ ಒತ್ತಡ ಹೇರಲಾಗುತ್ತಿದೆ. ಅಲ್ಲದೇ ದೂರು ದಾಖಲಾಗಿ ಒಂದು ತಿಂಗಳಾದರೂ ಪೊಲೀಸರು ವಿಚಾರಣೆ ನಡೆಸಲಿಲ್ಲ.
ಖ್ಯಾತ ನಟ ಧಮೇಂದ್ರ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಹಿಳೆಗೆ ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಕುಡಿಸಿ, ಆಕೆಯ ಜೊತೆಯಿದ್ದ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಕ್ಕೆ ಧರ್ಮೇಂದ್ರ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದರು.
Advertisement
ದೂರು ದಾಖಲಾಗಿ ಒಂದು ತಿಂಗಳಾದರೂ ಪೊಲೀಸರು ವಿಚಾರಣೆ ನಡೆಸಲಿಲ್ಲ. ಅಲ್ಲದೇ ಧರ್ಮನನ್ನು ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ತನ್ನನ್ನು ಬಂಧಿಸದಂತೆ ಧರ್ಮ ಪ್ರಭಾವಿಗಳಿಂದ ಒತ್ತಡ ತರುತ್ತಿದ್ದಾರೆ. ಹಾಗಾಗಿ ಪೊಲೀಸರು ದೂರು ದಾಖಲಾದ ಬಳಿಕ ಧರ್ಮ ಪರಾರಿಯಾಗಿದ್ದಾನೆ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ನಟ ಧರ್ಮೇಂದ್ರ ವಿರುದ್ಧ ದೂರು ದಾಖಲಿಸಿದ ಸಂತ್ರಸ್ತೆ
Advertisement
Advertisement
ಏನಿದು ಘಟನೆ?
ಧರ್ಮೇಂದ್ರ ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ಮಹಿಳೆಯನ್ನು ಕರೆಸಿಕೊಂಡಿದ್ದ. ಬಳಿಕ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೇಳಿ ಊಟಕ್ಕೆ ಹೋಟೆಲ್‍ಗೆ ಕರೆಸಿಕೊಂಡಿದ್ದಾನೆ. ಆರ್.ಆರ್ ನಗರದ ಹೋಟೆಲ್‍ಗೆ ಕಾರು ಚಾಲಕ ನವೀನ್ ಮೂಲಕ ಮಹಿಳೆಯನ್ನು ಧರ್ಮೇಂದ್ರ ಕರೆಸಿಕೊಂಡಿದ್ದಾನೆ. ಊಟದ ಬಳಿಕ ಧರ್ಮೇಂದ್ರ ಕೂಲ್‍ಡ್ರಿಂಕ್ಸ್ ನಲ್ಲಿ ಮತ್ತು ಬರೋ ಔಷಧಿ ಕುಡಿಸಿದ್ದಾನೆ. ಮಹಿಳೆಯೊಂದಿಗಿದ್ದ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನಿಮ್ಮ ಕುಟುಂಬಕ್ಕೆ ಈ ವಿಡಿಯೋ ತೋರಿಸೋದಾಗಿ ಬೆದರಿಕೆ ಹಾಕಿ 14 ಲಕ್ಷ ಹಣ ಸುಲಿಗೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು.
Advertisement
ಈ ಬಗ್ಗೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews