ಅಮರಾವತಿ: ದಕ್ಷಿಣ ಭಾರತದ ಹೆಚ್ಚಿನ ಕಡೆಗಳಲ್ಲಿ ನಡೆಸಲಾಗುವ ಜೂಜಿನ ಆಟ ಕೋಳಿ ಅಂಕಕ್ಕೆ ಆಂಧ್ರಪ್ರದೇಶದಲ್ಲಿ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಸಂಕ್ರಾಂತಿಗೆ ಕೆಲವೇ ದಿನಗಳು ಬಾಕಿ ಇರುವಾಗ ಕೋಳಿ ಅಂಕ ಜನರು ಸಜ್ಜಾಗುತ್ತಿದ್ದಂತೆ ಪೊಲೀಸರು ಅದರ ನಿರ್ಬಂಧದ ಕಟ್ಟೆಚ್ಚರಿಕೆ ನೀಡಿದ್ದಾರೆ.
ಕೋಳಿ ಅಂಕ ನಿಷೇಧ ಕೆಲವು ವರ್ಷಗಳ ಹಿಂದೆಯಷ್ಟೇ ಜಾರಿಯಾಗಿತ್ತು. ಹೀಗಿದ್ದರೂ ಜನರು ಅದನ್ನು ಮರೆತು ಮತ್ತೆ ಕೋಳಿ ಅಂಕಕ್ಕೆ ಸಜ್ಜಾಗುತ್ತಿದ್ದಾರೆ. ಮುಖ್ಯವಾಗಿ ಆಂಧ್ರಪ್ರದೇಶದ ಪೂರ್ವ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಕೋಳಿ ಅಂಕ ಹಾಗೂ ಬೆಟ್ಟಿಂಗ್ ನಡೆಯುವ ಪ್ರಮುಖ ಕೇಂದ್ರಗಳೆಂದು ವರದಿಯಾಗಿದೆ. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್
Advertisement
Advertisement
ಮಂಗಳವಾರ ಪೊಲೀಸರು ಸಂಕ್ರಾಂತಿಗೆಂದು ಸಿದ್ಧಪಡಿಸಿದ್ದ 4 ಕೋಳಿಗಳನ್ನು ಸೆರಹಿಡಿದು, ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಪಶ್ಚಿಮ ಗೋದಾವರಿಯ ಎಲೂರಿನಲ್ಲಿ ಬೆಟ್ಟಿಂಗ್ ದಂಧೆಯೊಂದನ್ನು ಬೇಧಿಸಿ 1.20 ಲಕ್ಷ ರೂ.ಯನ್ನು ವಶಪಡಿಸಿಕೊಂಡಿದ್ದಾರೆ.
Advertisement
ಕೋಳಿ ಅಂಕದಲ್ಲಿ ಪಂಟರ್ ಕೋಳಿಗಳ ಕಾಲಿಗೆ ಚಿಕ್ಕ ಕತ್ತಿಯನ್ನು ಕಟ್ಟಿ ಕಾಳಗಕ್ಕೆ ಬಿಡಲಾಗುತ್ತದೆ. ಎರಡು ಕೋಳಿಗಳಲ್ಲಿ ಯಾವುದಾದರೂ ಒಂದು ಸಾಯುವ ವರೆಗೂ ಕಾಳಗ ಮುಂದುವರಿಯುತ್ತದೆ. ಇದರಲ್ಲಿ ಪ್ರಾಣಿ ಹಿಂಸೆಯೊಂದಿಗೆ ಬೆಟ್ಟಿಂಗ್ ಕೂಡಾ ನಡೆಯುವ ಕಾರಣ ಈ ಆಟವನ್ನು ದಕ್ಷಿಣ ಭಾರತ ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಇದನ್ನೂ ಓದಿ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್
Advertisement
ಇಂತಹ ಕಾನೂನು ಬಾಹಿರ ಆಟಗಳಲ್ಲಿ ತೊಡಗಿಗೊಳ್ಳುವುದು ಅಥವಾ ಪ್ರೋತ್ಸಾಹಿಸುವುದು ತಿಳಿದು ಬಂದಲ್ಲಿ ಕಾನೂನು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತದೆ.