ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru Water Issue) ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಪೊಲೀಸ್ ಠಾಣೆಗೂ ಅದರ ಎಫೆಕ್ಟ್ ತಟ್ಟಿದೆ.
ಇಲಾಖೆ ವಾಹನದಲ್ಲಿ ಕ್ಯಾನ್‌ಗಳಲ್ಲಿ ನೀರನ್ನು ಪೊಲೀಸ್ ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದಾರೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್.ಆರ್. ನಗರದಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ದೇಶದಲ್ಲಿ ಶಾಂತಿ ಕದಲಿಸಲು ಸಿಎಎ ಜಾರಿಗೆ ತಂದಿದ್ದಾರೆ: ಡಿಕೆ ಶಿವಕುಮಾರ್
ಪಾತ್ರೆ-ಪಗಡೆಗಳನ್ನ ಹಿಡಿದು ಬೆಳ್ಳಂಬೆಳಗ್ಗೆ ಶುದ್ಧ ಕುಡಿಯುವ ನೀರಿನ ಘಟಕದ ಮುಂದೆ ಜನ ಕ್ಯೂ ನಿಲ್ಲುತ್ತಿದ್ದಾರೆ. ಬೆಳಗ್ಗೆ ಕೆಲಸ ಕಾರ್ಯಗಳನ್ನ ಬಿಟ್ಟು ಕುಡಿಯುವ ನೀರಿಗಾಗಿ ಕ್ಯೂ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅರ್ಧ ಗಂಟೆಯಾದರೂ ನೀರು ಸಿಗಲ್ಲ. ಕಳೆದ ಒಂದು ತಿಂಗಳಿನಿಂದ ಕಾವೇರಿ ನೀರು ಬರ್ತಾ ಇಲ್ಲ. ದಿನ ಇದೇ ಪರಿಸ್ಥಿತಿ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದೊಂದು ತಿಂಗಳಿನಿಂದ ನೀರಿನ ಸಮಸ್ಯೆ ತೀವ್ರಗೊಂಡಿದೆ. ವಿಜಯನಗರದ ಹೊಸಹಳ್ಳಿಯಲ್ಲಿ ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಅಡುಗೆ ಮಾಡೋಕು ನೀರು ಸಿಗದೇ, ಗೃಹಣಿಯೊಬ್ಬರು ಹೋಟೆಲ್‌ನಿಂದ ತಿಂಡಿ, ಊಟ ಆರ್ಡರ್ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇದೇ ಏರಿಯಾದ ಇನ್ನೊಬ್ಬರು ನೀರು ಸಿಗದಿದ್ದಕ್ಕೆ ಬೇರೊಂದು ಏರಿಯಾದಲ್ಲಿ ಮಗಳ ಮನೆಗೆ ಹೋಗಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಸ್ಪರ್ಧೆಗೆ ಮಲ್ಲಿಕಾರ್ಜುನ ಖರ್ಗೆ ಹಿಂದೇಟು?
ಸ್ಥಳೀಯ ಜಲಮಂಡಳಿ ಇಂಜಿನಿಯರ್, ವಾಲ್ ಮ್ಯಾನ್‌ಗಳಿಗೆ ಫೋನ್ ಮಾಡಿ ಅಂಗಲಾಚಿದರೂ ಉಚಿತ ಟ್ಯಾಂಕರ್ ನೀರು ಪೂರೈಕೆ ಮಾಡಿಲ್ಲ. ಇದರಿಂದ ಏರಿಯಾದ ಜನರಿಗೆ ಅಡುಗೆ ಮಾಡೋಕೂ ನೀರು ಸಿಗುತ್ತಿಲ್ಲ. ಅಲ್ಲೊಂದು ಇಲ್ಲಿಂದು ಕಾರ್ಯನಿರ್ವಹಿಸುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಹೋಗಿ, ತಂದ ನೀರಲ್ಲೇ ಜನ ಅಡುಗೆ ಮಾಡಿಕೊಳ್ಳುತ್ತಿದ್ದಾರೆ.
ಬೇಸಿಗೆಯ ಆರಂಭದಲ್ಲಿಯೇ ನೀರಿನ ಅಭಾವ ಇಡೀ ಬೆಂಗಳೂರಿನಾದ್ಯಾಂತ ಕಾಡುತ್ತಿದೆ. ಅಡುಗೆ ಮಾಡುವುದಕ್ಕೂ ನೀರು ಸಿಗುತ್ತಿಲ್ಲ. ಮುಂದೆ ಹೇಗೆ ಪರಿಸ್ಥಿತಿ ಎನ್ನುವ ಆತಂಕ ಜನರಲ್ಲಿ ಶುರುವಾಗಿದೆ. ಇದನ್ನೂ ಓದಿ: ಮಂಡ್ಯ ವಿಸಿ ನಾಲೆಗೆ ಕಾರು ಬಿದ್ದು ಓರ್ವ ಸಾವು