– ಆಡಿಯೋದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ
– ಪಬ್ಲಿಕ್ ಟಿವಿಗೆ ಖಾಸಗಿ ಎಫ್‌ಎಸ್‌ಎಲ್ ತಜ್ಞ ಫಣೀಂದ್ರ ಹೇಳಿಕೆ
ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ (Pakistan Zindabad) ಘೋಷಣೆ ಕೂಗಿದ ಸಂಬಂಧ ಇನ್ನೂ ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿಯ ಬಗ್ಗೆ ಸರ್ಕಾರ ಅಧಿಕೃತವಾಗಿ ಹೇಳಿಲ್ಲ. ಆದರೆ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ನಿಜ ಎಂದು ಪಬ್ಲಿಕ್ ಟಿವಿಗೆ ಉನ್ನತ ಪೊಲೀಸ್ ಮೂಲಗಳು (Police Source) ತಿಳಿಸಿವೆ. ಅಷ್ಟೇ ಅಲ್ಲದೇ ಖಾಸಗಿ ಎಫ್‌ಎಸ್‌ಎಲ್ ತಜ್ಞರ ಪರೀಕ್ಷೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿಚಾರ ದೃಢಪಟ್ಟಿದೆ.
Advertisement
ಹೌದು. ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಘೋಷಣೆ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಸರ್ಕಾರ ಎಫ್‌ಎಸ್‌ಎಲ್‌ಗೆ ವಿಡಿಯೋವನ್ನು ಕಳುಹಿಸಿಕೊಟ್ಟಿತ್ತು. ಎಫ್‌ಎಸ್‌ಎಲ್‌ಗೆ ಕಳುಹಿಸಿದ ಬಳಿಕ ಇಲ್ಲಿಯವರೆಗೆ ವಿಡಿಯೋದಲ್ಲಿ ಘೋಷಣೆ ಕೂಗಲಾಗಿದ್ಯಾ? ಇಲ್ಲವೇ? ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ.
Advertisement
Advertisement
ಗೃಹ ಸಚಿವ ಪರಮೇಶ್ವರ್ (Parameshwar) ಜೊತೆ ಈ ಬಗ್ಗೆ ಕೇಳಿದಾಗ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನೂ ಬಂದಿಲ್ಲ. ವರದಿ ಬಂದ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ 7 ಮಂದಿಯನ್ನು ಕರೆದು ತನಿಖೆ ಮಾಡಿ ವಾಯ್ಸ್ ರೆಕಾರ್ಡ್ ಸಹಾ ಮಾಡಿದ್ದೇವೆ. ಧ್ವನಿ (Voice) ತಾಳೆಯಾಗಬೇಕು. ಒಂದು ವಾಹಿನಿಯದ್ದು ಅಲ್ಲ ಸಾಕಷ್ಟು ಕ್ಲಿಪ್ ಇದೆ. ಎಲ್ಲವನ್ನೂ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ – ಎನ್‌ಐಎಗೆ ಕೇಸ್ ವರ್ಗಾವಣೆ
Advertisement
ಸರ್ಕಾರದ ಕಡೆಯಿಂದ ಧ್ವನಿ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಾರದೇ ಇದ್ದರೂ ಉನ್ನತ ಪೊಲೀಸ್ ಮೂಲಗಳ ಪ್ರಕಾರ ವಿಡಿಯೋ ಅಸಲಿಯಾಗಿದ್ದು ತಿರುಚಿಲ್ಲ. ಪಾಕ್ ಪರ ಘೋಷಣೆ ಕೂಗಿದ್ದು ನಿಜ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಈ ಮಾಹಿತಿಗೆ ಪೂರಕ ಎಂಬಂತೆ ಒಟ್ಟು 8 ಮಂದಿ ನಾಸೀರ್ ಹುಸೇನ್ ಬೆಂಬಲಿಗರನ್ನು ವಶಕ್ಕೆ ಪಡೆದು ಧ್ವನಿಯನ್ನು ಪರೀಕ್ಷಿಸಲಾಗಿದೆ. ಪರೀಕ್ಷೆ ಮಾಡಿದ್ದರಿಂದಲೇ ಅನುಮಾನ ಜಾಸ್ತಿಯಾಗಿದೆ. ಒಂದು ವೇಳೆ ಧ್ವನಿ ಪರೀಕ್ಷೆ ಮಾಡದೇ ಇದ್ದಿದ್ದರೆ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿಲ್ಲ ಎನ್ನುವುದು ದೃಢಪಡುತ್ತಿತ್ತು. ಆದರೆ 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬೆನ್ನಲ್ಲೇ ವಿಡಿಯೋದಲ್ಲಿರುವ ಘೋಷಣೆ ಅಸಲಿ ಎಂಬ ವಿಶ್ಲೇಷಣೆ ವ್ಯಕ್ತವಾಗುತ್ತದೆ.
ಪಾಕ್ ಪರ ಘೋಷಣೆ ಕೂಗಿದ್ದು ನಿಜ
ರಾಜ್ಯ ಸರ್ಕಾರ ಸರ್ಕಾರಿ ಎಫ್‌ಎಸ್‌ಎಲ್‌ಗೆ ವಿಡಿಯೋ ಕಳುಹಿಸಿದರೆ ಅದೇ ವಿಡಿಯೋವನ್ನು ಖಾಸಗಿಯವರು ಪರೀಕ್ಷೆ ನಡೆಸಿದ್ದಾರೆ. ಖಾಸಗಿಯವರು ನಡೆಸಿದ ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ನಾಸೀರ್ ಸಾಬ್ ಜಿಂದಾಬಾದ್ ಜೊತೆಗೆ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ ವಿಡಿಯೋ ಅಸಲಿ ಎಂದು ಎಫ್‌ಎಸ್‌ಎಲ್ ತಜ್ಞ ಫಣೀಂದ್ರ ಹೇಳಿದ್ದಾರೆ. ಇದನ್ನೂ ಓದಿ: ಬಾಂಬ್ ಬ್ಲಾಸ್ಟ್ ಗಾಯಾಳುಗಳಿಗೆ ಸರ್ಕಾರದಿಂದ ಚಿಕಿತ್ಸಾ ವೆಚ್ಚ – ಭರವಸೆ ಕೊಟ್ಟು ಸರ್ಕಾರ ಸೈಲೆಂಟ್
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಫಣೀಂದ್ರ ಅವರು, ವಿಡಿಯೋ ಸಾಚಾತನ ತಿಳಿಯಲು ಫ್ರೇಂ ಬೈ ಫ್ರೇಂ ಪರೀಕ್ಷೆ ಮಾಡಲಾಗಿದೆ. ವಿಡಿಯೋದಲ್ಲಿರುವ ಧ್ವನಿಯ ಸಾಚಾತನ ತಿಳಿಯಲು ಪದ, ಉಚ್ಛಾರಗಳ ಪರೀಕ್ಷೆ ಮಾಡಲಾಗಿದೆ. ಶಬ್ದ ವಿಜ್ಞಾನ ಅಥವಾ ಧ್ವನಿ ವಿಜ್ಞಾನ ವಿಶ್ಲೇಷಣೆಯಲ್ಲಿ ಕಂಡು ಬಂದ ಅಂಶ ಏನೆಂದರೆ ವಿಡಿಯೋದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿರುವ ಸಾಧ್ಯತೆಯೇ ಹೆಚ್ಚು ಹಾಗೂ ಸಂಭವನೀಯ ಎಂದು ತಿಳಿಸಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಕಾಂಗ್ರೆಸ್ಸಿನ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದರು. ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಜೈಕಾರ ಕೂಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.