– ಪತಿ, ಮತ್ತು ಆತನ ಪೋಷಕರ ವಿರುದ್ಧ ಪರಶುರಾಮ್ ಆರೋಪ
ಶಿವಮೊಗ್ಗ: ಓದು-ಬರಹ ಬಾರದ ಅಮಾಯಕರೊಬ್ಬರಿಗೆ ಪೊಲೀಸರು ಅನ್ಯಾಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
Advertisement
ಸ್ಟೌವ್, ಕುಕ್ಕರ್, ಮಿಕ್ಸಿ ರಿಪೇರಿ ಕೆಲಸ ಮಾಡುತ್ತಿದ್ದ ಪರುಶುರಾಮ್ ಎಂಬುವರ ಮಗಳು ಅಶ್ವಿನಿ ಸಂಬಂಧಿಯೊಬ್ಬನನ್ನು ಹೇಳದೇ ಕೇಳದೇ ಮದ್ವೆಯಾಗಿದ್ದಳು. ಮಗಳು ಚೆನ್ನಾಗಿದ್ರೆ ಸಾಕು ಅಂತ ತಂದೆ ತಾಯಿ ಸುಮ್ಮನಾಗಿದ್ರು. ಆದ್ರೆ ಒಂದು ದಿನ ನಿಮ್ಮ ಮಗಳು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ ಅಂತಾ ಸುದ್ದಿ ಬಂತು. ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಗಳು ಅಶ್ವಿನಿ ಮೃತಪಟ್ಟಳು.
Advertisement
Advertisement
ಓದು-ಬರಹ ತಿಳಿಯದ ಪರಶುರಾಮ್‍ರಿಂದ ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಸಾಕ್ಷಿಗೆ ಅಂತಾ ಸಹಿ ಹಾಕಿಸಿಕೊಂಡ್ರು. ಮಗಳನ್ನು ಕೊಂದವರಿಗೆ ಶಿಕ್ಷೆ ಆಗುತ್ತೆ ಅಂತಾ ಕಾಯ್ತಿದ್ದ ಪರಶುರಾಮ್‍ಗೆ ಇದೀಗ ಶಾಕ್ ಆಗಿದೆ.
Advertisement
ಯಾಕಂದ್ರೆ ಕೊಲೆ ಮಾಡಿದ ಆಕೆಯ ಅತ್ತೆ, ಮಾವ, ಪತಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಅಂದು ಪೊಲೀಸರು ಸಹಿ ಹಾಕಿಸಿಕೊಂಡಿದ್ದ ಪತ್ರಗಳನ್ನು ಅಕ್ಕಪಕ್ಕದವರಿಂದ ಓದಿಸಿದಾಗ ಸಿನಿಮಾಕ್ಕೆ ಕರೆದುಕೊಂಡು ಹೋಗಲಿಲ್ಲ ಅಂತಾ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದಕ್ಕೆ ಯಾರೂ ಕಾರಣರಲ್ಲ ಅಂತಾ ಬರೆದಿತ್ತು ಎನ್ನಲಾಗಿದೆ.
ಈ ಸಂಬಂಧ ಪರಶುರಾಮ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಗಳು ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದ್ದಾಳೆ ಅಂದ ಕೂಡಲೇ ನಾವು ಆಸ್ಪತ್ರೆಗೆ ಹೋಗಿದ್ದೆವು. ಆದ್ರೆ ಅಲ್ಲಿ ನಿಮ್ಮ ಮಗಳ ಶೆ.60ರಷ್ಟು ದೇಹ ಸುಟ್ಟು ಹೋಗಿದೆ. ಹೀಗಾಗಿ ಆಕೆ ಉಳಿಯುತ್ತಾಳೆ ಅನ್ನೋ ಭರವಸೆ ನಾವು ಕೊಡಲ್ಲ ಅಂತಾ ವೈದ್ಯರು ಹೇಳಿದ್ದರು. ನನಗೆ ಓದೋಕೆ ಬರಲ್ಲ ಏನೂ ಬರಲ್ಲ ಅಂತಾ ಗೊತ್ತಿದ್ದು ಪೊಲೀಸ್ರು ನನ್ನ ಕೈಯಿಂದ ಸಹಿ ಹಾಕಿಸಿಕೊಂಡಿದ್ದಾರೆ. ಕೆಲ ದಿನಗಳ ಬಳಿಕ ಅಕ್ಕಪಕ್ಕದ ಮನೆಯವರ ಜೊತೆ ಸಹಿ ಹಾಕಿಸಿದ ಹಾಳೆಯನ್ನು ತೋರಿಸಿದಾಗ ಅವರು, ನಿಮ್ಮ ಮಗಳೇ ಸ್ವತಃ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಹೇಳಿ ನಿನ್ನ ಬಳಿ ಸಹಿ ಹಾಕಿಸಿಕೊಂಡಿದ್ದಾರೆ ಅಂತಾ ಹೇಳಿದ್ರು. ಈ ವೇಳೆ ವಿಚಾರ ನಮಗೆ ತಿಳಿದಿದೆ. ಆದ್ರೆ ಈ ಬಗ್ಗೆ ಪೊಲೀಸರ ಹತ್ರ ಕೇಳು ಹೋದ್ರೆ ನಮಗೆ ಮಾತಾಡಲು ಅವಕಾಶನೇ ಕೊಡಲ್ಲ. ಸರ್ ಏನಿದು? ಯಾಕ್ ಹಿಂಗೆ ಮಾಡಿದ್ರಿ ಅಂತಾ ಕೆಳಿದ್ರೆ, ನಿಗ್ಯಾಕೋ ಅದೆಲ್ಲಾ. ಸುಮ್ನೆ ನಿಂತ್ಕೋ ಅಲ್ಲಿ. ನಾವು ಹೇಳಿದಷ್ಟು ಕೇಳು ಅಂತಾ ಬೆದರಿಸುತ್ತಾರೆ. ಒಟ್ಟಿನಲ್ಲಿ ನಮ್ಮ ಜಾಗದಲ್ಲಿ ಬೇರೆ ತಂದೆ-ತಾಯಿ ಇರುತ್ತಿದ್ರೆ ಜೀವ ಕಳ್ಕೊಂಡು ಬಿಡೋರು. ಸದ್ಯ ಮಗಳ ಸಾವಿಗೆ ನ್ಯಾಯ ಕೊಡಿಸಬೇಕೆಂದು ಅಂತಾ ಕಣ್ಣೀರು ಹಾಕಿದ್ದಾರೆ.