ಬಾಲಕನನ್ನು ಕಿಡ್ನಾಪ್ ಮಾಡಿ, 50 ಲಕ್ಷ ಬೇಡಿಕೆಯಿಟ್ಟು ಗುಂಡೇಟು ತಿಂದ

Public TV
1 Min Read
shootout

ಬೆಂಗಳೂರು: ಕಿಡ್ನಾಪ್ ಮಾಡಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಮೇಲೆ ಹೆಣ್ಣೂರಿನ ಸಾರಾಯಿಪಾಳ್ಯ ಬಳಿ ಪೊಲೀಸರು ಗುಂಡು ಹಾರಿಸಿದ್ದಾರೆ.

ಶನಿವಾರ ಮಧ್ಯಹ್ನ 2 ಗಂಟೆ ಸುಮಾರಿಗೆ 15 ವರ್ಷದ ಬಾಲಕನನ್ನು ಆರೋಪಿ ಮುಬಾರಕ್ ಸೇರಿ ಮೂವರು ಕಿಡ್ನಾಪ್ ಮಾಡಿದ್ದರು. ಬಳಿಕ ಬಾಲಕನ ಪೋಷಕರಿಗೆ ಕರೆ ಮಾಡಿ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸಂಜೆ 5:30ರ ವೇಳೆಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು.

shootout 1

ಆರೋಪಿಗಳನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಗ್ಯಾಂಗ್ ಹಲ್ಲೆ ಮಾಡಿತ್ತು. ಬಾಣಸವಾಡಿ ಪೊಲೀಸ್ ಪೇದೆ ನಾಯಕ್ ಅವರಿಗೆ ಆರೋಪಿಗಳು ಚಾಕು ಇರಿದಿದ್ದರು. ಈ ವೇಳೆ ಆತ್ಮ ರಕ್ಷಣೆಗಾಗಿ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಹಾಗೆಯೇ ತಪ್ಪಿಸಿಕೊಂಡು ಹೋಗುತ್ತಿದ್ದ ಮುಬಾರಕ್ ಕಾಲಿಗೆ ಕೆ.ಜಿ ಹಳ್ಳಿ ಇನ್ಸ್‌ಪೆಕ್ಟರ್ ಅಜಯ್ ಸಾರತಿ ಅವರು ಗುಂಡು ಹೊಡೆದು, ಬಾಲಕನನ್ನು ರಕ್ಷಿಸಿದರು.

shootout 2

ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಗುಂಡೇಟು ತಿಂದ ಮುಬಾರಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಬಾಲಕನನ್ನು ಪೊಲೀಸರು ಸುರಕ್ಷಿತವಾಗಿ ಪೋಷಕರ ಬಳಿ ತಲುಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *