ಬೆಂಗಳೂರು: ಕಳೆದ ಕೆಲವು ದಿನಗಳಿಂದ ಐಟಿ ದಾಳಿಯಿಂದಾಗಿ ತತ್ತರಿಸಿದ್ದ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್ ಇಂದು ಪೊಲೀಸರಿಂದ ಮತ್ತೊಂದು ಟ್ರಬಲ್ ಎದುರಿಸಿದ್ದಾರೆ.
ಗುರುವಾರ ಬೆಂಗಳೂರಿನ ಶಕ್ತಿ ಭವನದ ಆವರಣದಲ್ಲಿ ಡಿ.ಕೆ.ಶಿವಕುಮಾರ್ ಕಾರು ನಿಂತಿತ್ತು. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಗಾವಲು ವಾಹನಗಳಿಗೆ ಅಡ್ಡಿ ಆಗುತ್ತದೆ ಅಂತಾ ಡಿ.ಕೆ.ಶಿವಕುಮಾರ್ ಅವರ ಕಾರನ್ನು ಪೊಲೀಸರು ಬೇರೆ ಕಡೆ ಪಾರ್ಕ್ ಮಾಡಲು ಸೂಚಿಸಿದ್ದಾರೆ. ಇದನ್ನು ಓದಿ: ಐಟಿ ದಾಳಿಗೆ ಒಳಗಾಗಿರೋ ಡಿಕೆಶಿಗೆ ಹೊಸ ಸಂಕಷ್ಟ!
ಶಕ್ತಿ ಭವನಕ್ಕೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡುತ್ತಿದ್ದರು. ಈ ವೇಳೆ ಸಚಿವ ಡಿ.ಕೆ.ಶಿವಕುಮಾರ್ ಅವರ ಕಾರು ಗೇಟ್‍ನಿಂದ ದೂರದಲ್ಲಿದ್ದರೂ ಬಿಡದ ಪೊಲೀಸರು ಮುಂದಕ್ಕೆ ಕಳುಹಿಸಿದ್ದಾರೆ.