ಬೆಂಗಳೂರು: ಹೆಬ್ಬಾಳ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ವಿಕೆಂಡ್ ಮಸ್ತಿಯಲ್ಲಿ ವೀಲಿಂಗ್, ಸ್ಟಂಟ್ ಮಾಡುತ್ತಿದ್ದ ಮೂವತ್ತು ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಕೆಂಡ್ ಮಸ್ತಿ ಎಂದು ಯುವಕರು ಹೆಬ್ಬಾಳ, ಏರ್ ಪೊರ್ಟ್ ರೋಡ್ ನಾಗವಾರ ರಿಂಗ್ ರಸ್ತೆಯಲ್ಲಿ ವೀಲಿಂಗ್ ಹಾಗೂ ಸ್ಟಂಟ್ ಮಾಡುತ್ತಿದ್ದರು. ಹೀಗಾಗಿ ಹೆಬ್ಬಾಳ ಸಂಚಾರಿ ಪೊಲೀಸರು 30 ಬೈಕ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
Advertisement
Advertisement
ಯುವಕರು ವೀಲಿಂಗ್ ಹಾಗೂ ಸ್ಟಂಟ್ ಮಾಡುತ್ತಿರುವುದನ್ನು ತಡೆಯಲು ಹೆಬ್ಬಾಳ ಸಂಚಾರಿ ಪೊಲೀಸರು ವಿಕೆಂಡ್ನಲ್ಲಿ ವಿಶೇಷ ಕಾರ್ಯಚಾರಣೆ ನಡೆಸಿದ್ದರು. ಬೈಕ್ ಸ್ಟಂಟ್ ಹಾಗೂ ವಿಲೀಂಗ್ ಮಾಡಲು ಕಾಲೇಜಿನ ಯುವಕರು ಬೈಕ್ಗಳನ್ನು ಮಾಡಿಫೈ ಮಾಡಿಸಿ ಸ್ಟಂಟ್ ಮಾಡುತ್ತಿದ್ದರು.
Advertisement
ಪೊಲೀಸರು ಕಾರ್ಯಚರಣೆ ನಡೆಸಿದ್ದಾಗ ಬೈಕ್ ಸವಾರರು ಯಾವುದೇ ದಾಖಲಾತಿಗಳನ್ನು ಹೊಂದಿರಲಿಲ್ಲ. ಸದ್ಯ ಪೊಲೀಸರು ಬೈಕ್ ಜಪ್ತಿ ಪಡೆದುಕೊಂಡು ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.