ಬೆಳಗಾವಿ: ಹುಬ್ಬಳ್ಳಿ ಯುವತಿ (Hubballi Murder Case) ಕೊಲೆ ಪ್ರಕರಣದ ಆರೋಪಿ ಫಯಾಜ್ (Fayaz) ಮನೆಗೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಆರೋಪಿ ಕುಟುಂಬಸ್ಥರು ಬೆಳಗಾವಿ (Belagavi) ಪೊಲೀಸರ ಸುಪರ್ದಿಯಲ್ಲಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯ ಸಾಯಿನಗರದಲ್ಲಿ ಆರೋಪಿ ಫಯಾಜ್ ಮನೆ ಇದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಉದ್ದೇಶದಿಂದ ಆರೋಪಿ ಮನೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಯುವತಿ ಹತ್ಯೆ ಖಂಡಿಸಿ ಭುಗಿಲೆದ್ದ ಆಕ್ರೋಶ; ವಿದ್ಯಾರ್ಥಿಗಳು, ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
Advertisement
Advertisement
ಆರೋಪಿಯ ತಂದೆ, ತಾಯಿ ಹಾಗೂ ಸಹೋದರಿ ಪೊಲೀಸ್ ಸುಪರ್ದಿಯಲ್ಲಿದ್ದಾರೆ. ಬೆಳಗಾವಿ ಎಸ್‌ಪಿ ಡಾ. ಭೀಮಾಶಂಕರ್ ಗುಳೇದರಿಂದ ಆರೋಪಿ ಕುಟುಂಬಸ್ಥರು ಸೆಕ್ಯೂರ್ ಮಾಡಲಾಗಿದೆ.
Advertisement
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ (Neha Hiremath) ಹತ್ಯೆಯನ್ನು ಖಂಡಿಸಿ ಮುನವಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಪಿ ಮನೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಲವ್ ಜಿಹಾದ್‌ಗೆ ಬಲಿಯಾಗಲ್ಲ ಅಂದ್ರೆ ಅವಳ ಕುತ್ತಿಗೆಗೆ ಚಾಕು ಹಾಕಿ ಸಾಯಿಸ್ತಾರೆ.. ಸರ್ಕಾರ ಮೂಕಪ್ರೇಕ್ಷಕನಂತಿರುತ್ತೆ: ಸಿ.ಟಿ.ರವಿ
Advertisement
ಪ್ರೀತಿ ವಿಚಾರವಾಗಿ ನೇಹಾ ಯುವತಿಯನ್ನು ಹುಬ್ಬಳ್ಳಿ ಕಾಲೇಜಿನಲ್ಲೇ ಫಯಾಜ್ ಎಂಬಾತ ಚಾಕುವಿನಿಂದ 9 ಬಾರಿ ಇರಿದು ಕೊಂದಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.