ಬೆಂಗಳೂರು: ಇನ್ನೇನು ಎರಡು ದಿನದಲ್ಲಿ ನಾವು ಮತ್ತೆ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಬಾರಿಯ ನ್ಯೂ ಇಯರ್ (New Year Celebration) ಆಚರಣೆಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವೊಂದು ಪೊಲೀಸ್ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ರೂಲ್ಸ್ ಗಳನ್ನು ಅನುಸರಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
Advertisement
ಹೊಸ ವರ್ಷ ಆಚರಣೆ ಹಿನ್ನೆಲೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ (Pratap Reddy), ಈಗ ವೀಡಿಯೋ ಕಾನ್ಫರೆನ್ಸ್ ಮೂಲಕ ಬಂದೋಬಸ್ತ್ ಗೆ ಸೂಚನೆ ನೀಡಲಾಗಿದೆ. 8 ಸಾವಿರದ 500 ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಟ್ರಾಫಿಕ್ ನ ಎಲ್ಲಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮಹಿಳೆ ಮತ್ತು ಮಕ್ಕಳ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಲಾಗಿದೆ ಎಂದರು.
Advertisement
Advertisement
Advertisement
ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಮಧ್ಯರಾತ್ರಿ 1 ಗಂಟೆಯ ತನಕ ಮಾತ್ರ ಅವಕಾಶ ನೀಡಲಾಗುತ್ತಿದೆ. ಶಬ್ದಮಾಲಿನ್ಯ ನಿಯಂತ್ರಣಕ್ಕೆ ಎಸಿಪಿ ಮಟ್ಟದಲ್ಲಿ ಟೀಂ ಮಾಡಲಾಗಿದೆ. ಜನಸಂದಣಿಯ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. 4,000 ಕ್ಯಾಮರಾ ಸಿಸಿ ಟಿವಿ ಕ್ಯಾಮೆರಾ (CCTV Camera) ಗಳನ್ನು ಹಾಕಲಾಗುತ್ತೆ. ಬೆಂಗಳೂರು ಎಲ್ಲಾ ಕಡೆಯೂ ಹೈಕ್ವಾಲಿಟಿ ಕ್ಯಾಮೆರಾಗಳು ಇವೆ. ಮಹಿಳೆಯರಿಗೆ ಐ ಲ್ಯಾಂಡ್ಸ್ ಗಳು ಇರುತ್ತೆ, ಟವರ್ ವಾಚ್ ಗಳು ಇರುತ್ತೆ ಎಂದು ವಿವರಿಸಿದರು.
ವೈದ್ಯ ಇಲಾಖೆಯ ಜೊತೆ ಮಾತನಾಡಲಾಗಿದೆ. ಕೆಲವೊಂದು ಬೆಡ್ ಗಳನ್ನು ಮೀಸಲು ಮಾಡಲಾಗಿದೆ. ಅಂಬುಲೆನ್ಸ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಡ್ರಗ್ಸ್ ಬಗ್ಗೆಯೂ ಎಚ್ಚರಿಕೆಯನ್ನು ವಹಿಸಲಾಗಿದೆ. ಪರವಾನಿಗೆ ಇರುವ ಪಿಸ್ತೂಲ್, ರಿವಾಲ್ವರ್ ಗಳನ್ನು ಸಂಭ್ರಮಾಚರಣೆ ಸ್ಥಳಕ್ಕೆ ತರುವಂತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನಾಳೆ ಮಂಡ್ಯಗೆ ಅಮಿತ್ ಶಾ- ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು
ಜನರಲ್ಲಿ ನಮ್ಮದೊಂದು ಮನವಿ ಮಾಡುತ್ತೇವೆ. ರಸ್ತೆಯ ಬದಿಯಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡರೆ ತಕ್ಷಣ ಪೊಲೀಸರಿಗೆ ತಿಳಿಸಿ. ಪೊಲೀಸರು ತಕ್ಷಣವೇ ಕಾರ್ಯ ಪ್ರವೃತ್ತರಾಗುತ್ತಾರೆ. ಅನುಮಾನಸ್ಪದ ವಸ್ತುಗಳ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಇದೇ ವೇಳೆ ಅವರು ವಿನಂತಿಸಿಕೊಂಡರು.
ಸಾರ್ವಜನಿಕರು ಹೆಚ್ಚಾಗಿ ಪಬ್ಲಿಕ್ ವೆಹಿಕಲ್ ಬಳಸಿ. ಬಿಎಂಟಿಸಿ, ಮೆಟ್ರೋ ಎರಡು ಕೂಡ ಕಾರ್ಯ ನಿರ್ವಹಿಸುತ್ತವೆ. ರಾತ್ರಿ 9 ಗಂಟೆಯ ಬಳಿಕ ಇಂಟರ್ ನ್ಯಾಶನಲ್ ಏರ್ ಪೋರ್ಟ್ ಪ್ಲೈಓವರ್ ಹೊರತು ಪಡಿಸಿ ಎಲ್ಲಾ ಪ್ಲೈ ಓವರ್ ಬಂದ್ ಮಾಡಲಾಗುವುದು. ಎಲಿವೇಟೆಡ್ ರಸ್ತೆಯಲ್ಲಿ 9 ಗಂಟೆಯ ನಂತರ ಸಂಚಾರಕ್ಕೆ ಅವಕಾಶ ಇಲ್ಲ. ರಾತ್ರಿ 9 ಗಂಟೆಯ ನಂತರ ನೈಸ್ ರೋಡ್ ದ್ವಿಚಕ್ರ ವಾಹನ ಇಲ್ಲ. ಡ್ರ್ಯಾಗ್ ರೈಸಿಂಗ್ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡಲಾಗುತ್ತೆ ಎಂದು ತಿಳಿಸಿದರು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಸಂದೀಪ್ ಪಾಟೀಲ್, ಸಂಚಾರಿ ಮುಖ್ಯಸ್ಥ ಸಲೀಂ, ಅನುಚೇತ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.