ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ದರ್ಶನ್‌ಗೆ (Darshan) ಒಂದಲ್ಲಾ ಒಂದು ಕಂಟಕ ಎದುರಾಗಿದೆ. ತನಿಖೆ ವೇಳೆ ಸಿಕ್ಕಿರುವ 8 ಫೋಟೋಗಳು ಪ್ರಕರಣದ ಮಹತ್ವದ ಸಾಕ್ಷಿಯಾಗಿ ಪರಿಣಮಿಸಿದೆ.
ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿ ಪುನಿತ್ ಮೊಬೈಲ್‌ನಲ್ಲಿ ಸಿಕ್ಕ ಮಹತ್ವದ ಸಾಕ್ಷಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫೋಟೋ ಸಿಕ್ಕರೇ ನನಗೆ ಕಂಟಕವಾಗುತ್ತೆ ಎಂಬ ಭಯದಲ್ಲಿದ್ದ ಪ್ರತ್ಯಕ್ಷದರ್ಶಿ ಪುನೀತ್ ಅವುಗಳನ್ನು ಡಿಲೀಟ್ ಮಾಡಿದ್ದ. ಇದೀಗ ತನಿಖಾಧಿಕಾರಿಗಳು ರಿಟ್ರೀವ್ ಮಾಡಿದ್ದು ಪುನೀತ್ ಮೊಬೈಲ್‌ನಲ್ಲಿದ್ದ 8 ಫೋಟೋಗಳನ್ನು ರಿಕವರಿ ಮಾಡಿದ್ದಾರೆ.
ರಿಕವರಿಯಾದ ಫೋಟೋದಲ್ಲಿ, ಕೊಲೆ ನಡೆದ ಶೆಡ್‌ನಲ್ಲಿ ಆರೋಪಿಗಳ ಜೊತೆ ದರ್ಶನ್ ನೀಲಿ ಟೀ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಪೋಸ್ ಕೊಟ್ಟಿದ್ದಾರೆ. ಆರೋಪಿ ವಿನಯ್ ರ‍್ಯಾಗ್ಲಂರ್ ಕಾರಿನ ಮುಂದೆ, ಎ2 ಆರೋಪಿ ನಟ ದರ್ಶನ್, ಮೂವರು ಆರೋಪಿಗಳಾದ ಎ6 ಜಗ್ಗ, ಎ7 ಅನುಕುಮಾರ್, ಎ8 ರವಿಶಂಕರ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆರೋಪಿಗಳು ಪುನೀತ್‌ಗೆ ಹಾಯ್ ಎಂದು ಮೇಸೇಜ್ ಮಾಡಿ ಫೋಟೊಗಳನ್ನ ತರಿಸಿಕೊಂಡಿರುವುದು ತನಿಖೆ ವೇಳೆ ಬಯಲಾಗಿದೆ.
ಇದೇ ಪ್ರಕರಣದ ವಿಚಾರವಾಗಿ ಬೆಂಗಳೂರಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ (G.Parameshwar) ಪ್ರತಿಕ್ರಿಯಿಸಿದ್ದಾರೆ. ಮೊಬೈಲ್‌ನ್ನು ಪೊಲೀಸರು ಎಫ್‌ಎಸ್‌ಎಲ್‌ಗೆ ಕಳುಹಿಸಿ ಮೊಬೈಲ್‌ನಲ್ಲಿ ಕೊಲೆಯಾದ ಜಾಗದಲ್ಲಿ ನಟ ದರ್ಶನ್ ಇರೋ ಪೋಟೋ ರಿಟ್ರೀವ್ ಆಗಿದೆ. ಚಿಕಿತ್ಸೆಗಾಗಿ ಬೇಲ್ ಪಡೆದಿರೋ ದರ್ಶನ್‌ಗೆ ಇನ್ನು ಆಪರೇಷನ್ ಆಗಿಲ್ಲ. ಹೀಗಾಗಿ ಅವರ ಜಾಮೀನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡ್ತೇವೆ ಎಂದು ಹೇಳಿದ್ದಾರೆ.