ಮೈಸೂರು: ಗಾಯಗೊಂಡಿದ್ದ ನಾಗರಹಾವನ್ನು ಪೊಲೀಸ್ ಪೇದೆಯೊಬ್ಬರು ರಕ್ಷಿಸಿ ಚಿಕಿತ್ಸೆ ಕೊಡಿಸಿದ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸ್ ಪೇದೆಯ ಉರಗ ಪ್ರೇಮ ಎಲ್ಲರ ಮನ ಗೆದ್ದಿದೆ.
ಮೈಸೂರಿನ ಲಲಿತಾದ್ರಿಪುರದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಕಟ್ಟಡವೊಂದರ ಕಾಮಗಾರಿ ನಡೆಯುತ್ತಿದ್ದ ವೇಳೆ ನಾಗರಹಾವೊಂದು ಗಾಯಗೊಂಡಿತ್ತು. ಇದನ್ನು ಕಂಡ ಪೊಲೀಸ್ ಪೇದೆ ಕೆಂಪರಾಜು ಹಾವನ್ನು ರಕ್ಷಿಸಿದ್ದಾರೆ. ಬಳಿಕ ಅದಕ್ಕೆ ನೀರನ್ನು ಕುಡಿಸಿ ಮೈಸೂರಿನ ಧನ್ವಂತರಿ ರಸ್ತೆಯಲ್ಲಿರೋ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
Advertisement
Advertisement
ಗಾಯಗೊಂಡ ಹಾವಿಗೆ ಪಶು ಆಸ್ಪತ್ರೆಯಲ್ಲಿ ಅನಾಸ್ತೇಶಿಯಾ ಕೊಟ್ಟು ವೈದ್ಯ ಯಶ್ವಂತ್ ಹಾಗೂ ವೈದ್ಯ ತಿಮ್ಮೇಗೌಡ ಚಿಕಿತ್ಸೆ ನೀಡಿದ್ದಾರೆ. ನಾಗರಹಾವು ಚೇತರಿಸಿಕೊಂಡ ಬಳಿಕ ಪೊಲೀಸ್ ಪೇದೆ ತಾವೇ ಖುದ್ದಾಗಿ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.
Advertisement
https://www.youtube.com/watch?v=SFh3fBH6e0I