ಹಾವೇರಿ: ಬಿಎಡ್ ವಿದ್ಯಾರ್ಥಿನಿಯೊಬ್ಬಳು ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಆಕೆಯನ್ನು ಕಿಡ್ನ್ಯಾಪ್ ಮಾಡಿದ ಘಟನೆ ಹಾವೇರಿಯ (Haveri) ಹಳೆಯ ಪೋಸ್ಟ್ ಆಫೀಸ್ ಬಳಿ ನಡೆದಿದೆ.
ಬೆಳಿಗ್ಗೆ 9ರ ಸಮಯದಲ್ಲಿ ಯುವತಿ ಕಾಲೇಜ್‍ಗೆ ತೆರಳುತ್ತಿದ್ದ ವೇಳೆ, ಕಾರಿನಲ್ಲಿ ಬಂದ ಪಾಗಲ್ ಪ್ರೇಮಿ ಆಕೆಯನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಯುವತಿ ರಕ್ಷಣೆಗೆ ತೆರಳಿದ್ದಾರೆ. ಇದನ್ನು ಅರಿತ ಆರೋಪಿ, ಯುವತಿಯನ್ನು ಮೋಟೆಬೆನ್ನೂರು ಬಳಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಬಳಿಕ ಫೋನ್ ಟ್ರ್ಯಾಕ್ ಮಾಡಿ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಪೊಲೀಸ್ (Police) ಠಾಣೆಗೆ ಯುವತಿಯನ್ನು ಕರೆತರುತ್ತಿದ್ದಂತೆ, ತಾಯಿಯನ್ನು ಅಪ್ಪಿ ಕಣ್ಣೀರಿಟ್ಟಿದ್ದಾಳೆ.ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಡೀಪ್‍ಫೇಕ್ ವೀಡಿಯೋ ವೈರಲ್
- Advertisement
ಯುವತಿಯನ್ನು ಅಪಹರಿಸಿದ ಆರೋಪಿಯನ್ನು, ವಿಷ್ಣು ತಗಡಿನಮನಿ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.
- Advertisement
ಕಳೆದ ಒಂದು ವರ್ಷದಿಂದ ಹಾಸ್ಟೆಲ್, ಬಸ್ ನಿಲ್ದಾಣದ ಬಳಿ ಬಂದು ಪಾಗಲ್ ಪ್ರೇಮಿ ಪ್ರೀತಿಸುವಂತೆ ಕಾಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಭಾರೀ ಮಳೆ- 19 ಮಂದಿ ಸಾವು, ಹಲವರು ನಾಪತ್ತೆ