ಬಳ್ಳಾರಿ: ವಿದೇಶಿ ಪ್ರಜೆಯೊಬ್ಬರು ಗುಡ್ಡ ಹತ್ತಲು ಹೋಗಿ ಕಾಲು ಜಾರಿ ಬಿದ್ದು ಎರಡು ದಿನಗಳ ಕಾಲ ನರಳಾಡಿರುವ ಘಟನೆ ವಿಶ್ವವಿಖ್ಯಾತ ಹಂಪಿಯ (Hampi) ಅಷ್ಟಭುಜ ಸ್ನಾನದ ಗುಡ್ಡದ ಹಿಂಭಾಗದಲ್ಲಿ ನಡೆದಿದೆ.
ಪ್ರಾನ್ಸ್ ಮೂಲದ (France Tourist) ಬ್ರೋನೋ ರೋಜರ್ (52) ಗುಡ್ಡ ಹತ್ತಲು ಹೋಗಿ ಕಾಲು ಜಾರಿ ಬಿದ್ದ ವ್ಯಕ್ತಿ. ಬ್ರೋನೋ ರೋಜರ್ 24ರ ಸಾಯಂಕಾಲ 6 ಗಂಟೆಗೆ ಅಷ್ಟಭುಜ ಸ್ನಾನದ ಕೊಳ್ಳದ ಗುಡ್ಡದ ಹಿಂಭಾಗ, ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಆಗ ಕಾಲು ಜಾರಿ ಬಿದ್ದಿದ್ದರು. ಎರಡು ದಿನಗಳ ಕಾಲ ಗುಡ್ಡದ ಹಿಂಭಾಗದಲ್ಲೇ ನೊವಿನಿಂದ ಕಾಲ ಕಳೆದಿದ್ದರು. ಇದನ್ನೂ ಓದಿ: ಬೆಂಗಳೂರು, ಮಂಗಳೂರಲ್ಲಿ ಕ್ರಿಸ್ಮಸ್ ಆಚರಿಸಿದ ಗ್ರೇಸ್ ಮಿನಿಸ್ಟ್ರಿ; ಬಡಮಕ್ಕಳ ಶಿಕ್ಷಣಕ್ಕೆ 15 ಲಕ್ಷ ರೂ. ದಾನ
ಆ ಬಳಿಕ ಅಲ್ಲೇ ಇದ್ದ ಬಾಳೆ ತೋಟಕ್ಕೆ ತೆವಳಿಕೊಂಡೆ ಬಂದಿದ್ದ. ಬ್ರೋನೋ ರೋಜರ್‌ನನ್ನು ಗಮನಿಸಿದ ಸ್ಥಳಿಯ ರೈತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬಳಿಕ ಪುರಾತತ್ವ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ನ್ಯೂಇಯರ್‌ಗೆ ದಿನಗಣನೆ – ಪಬ್, ಬಾರ್ & ರೆಸ್ಟೋರೆಂಟ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೆ ಅನುಮತಿ

