-3 ತಿಂಗಳಿಂದ ಪೊಲೀಸ್ ಠಾಣೆಗೆ ಅಲೆದಾಟ
ಲಕ್ನೋ: ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಬಗ್ಗೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಆದರೆ ಈ ಸಂದರ್ಭದಲ್ಲೇ ಮಹಿಳೆಯೊಬ್ಬರು ದೂರು ಕೊಡಲು ಹೋದಾಗ ಪೊಲೀಸರು, ಅತ್ಯಾಚಾರ ನಡೆದ ಮೇಲೆ ಬಾ ಎಂಬ ಬೇಜವಾಬ್ದಾರಿತನದ ಉತ್ತರವನ್ನು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಉನ್ನಾವೋ ಜಿಲ್ಲೆಯ ಹಿಂದೂಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವರ ವಿರುದ್ಧ ದೂರು ಕೊಡಲು ಪೊಲೀಸ್ ಠಾಣೆಗೆ ಹೋಗಿದ್ದೆ. ಆಗ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದರು. ಅಲ್ಲದೇ ಅತ್ಯಾಚಾರ ನಡೆದ ನಂತರ ಬಾ ನೋಡಿಕೊಳ್ಳೋಣ ಎಂದು ಹೇಳಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.
Advertisement
Advertisement
ಏನಿದು ಘಟನೆ?
ಕೆಲವು ತಿಂಗಳ ಹಿಂದೆ ನಾನು ಔಷಧಿ ಖರೀದಿಸಲು ಹೋಗುತ್ತಿದ್ದೆ. ಆಗ ಅದೇ ಗ್ರಾಮದ ಮೂವರು ಪುರುಷರು ನನ್ನನ್ನು ಅಡ್ಡಗಟ್ಟಿ ನನ್ನ ಬಟ್ಟೆ ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದರು. ಬಳಿಕ ಪೊಲೀಸ್ ಠಾಣೆಗೆ ಹೋಗಿ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ದೂರು ನೀಡಿದೆ. ಆದರೆ ಠಾಣೆಯಲ್ಲಿದ್ದ ಪೊಲೀಸರು ದೂರು ದಾಖಲಿಸದೆ, “ಇನ್ನೂ ಅತ್ಯಾಚಾರ ನಡೆದಿಲ್ಲವಲ್ಲ, ರೇಪ್ ಆದ ಮೇಲೆ ಬಾ ನೋಡೋಣ” ಎಂದು ನನ್ನನ್ನು ಹೊರಗೆ ತಳ್ಳಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
Advertisement
ತಾನು ಮೂರು ತಿಂಗಳಿನಿಂದ ಪೊಲೀಸ್ ಠಾಣೆಗೆ ಅಲೆಯುತ್ತಿದ್ದೇನೆ. ಆದರೆ ಈ ಕುರಿತು ಯಾರು ಪ್ರಕರಣವನ್ನು ದಾಖಲಿಸಿಕೊಳ್ಳಲಿಲ್ಲ. ಘಟನೆಯ ನಡೆದ ನಂತರ ನಾನು 1090 (ಮಹಿಳಾ ಸಹಾಯವಾಣಿ) ಗೆ ಕರೆ ಮಾಡಿದೆ. ಅವರು 100ಕ್ಕೆ ಕರೆ ಮಾಡು ಎಂದರು. ತಕ್ಷಣ ನಾನು ಉನ್ನಾವೋ ಪೊಲೀಸರಿಗೆ ಫೋನ್ ಮಾಡಿ ವರದಿ ಮಾಡಿದೆ. ಆದರೆ ಅವರು ಘಟನೆ ನಡೆದ ಪ್ರದೇಶದಲ್ಲಿನ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವಂತೆ ಹೇಳಿದ್ದರು. ಆದರೆ ಈಗ ಮೂವರು ಆರೋಪಿಗಳು ನನ್ನ ಮನೆಗೆ ಬಂದು, ದೂರು ನೀಡಿದರೆ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.
Advertisement
ಇತ್ತೀಚೆಗೆ ಮಹಿಳೆ ಉನ್ನಾವೋದಲ್ಲಿ ಅಧಿಕಾರಿಯೊಬ್ಬರನ್ನ ಭೇಟಿಯಾಗಿದ್ದು, ಅವರು ಬಿಹಾರ್ ಪೊಲೀಸ್ ಠಾಣೆಗೆ ದೂರು ನೀಡಲು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಉನ್ನಾವೋದ ಐಜಿ ಎಸ್.ಕೆ ಭಗತ್ ಸಿಂಗ್ ಅವರನ್ನ ಕೇಳಿದಾಗ, ನಾನು ಬೆಳಗ್ಗಿನಿಂದ ಕಚೇರಿಯಲ್ಲಿಯೇ ಕುಳಿತಿದ್ದೇನೆ. ಆದರೆ ಯಾರೂ ನನ್ನ ಬಳಿ ಬಂದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.