Bengaluru CityDistrictsKarnatakaLatestMain Post

ಆ್ಯಸಿಡ್ ದಾಳಿ ಸಂತ್ರಸ್ತೆಯಿಂದ ಡೈಯಿಂಗ್ ಡಿಕ್ಲರೇಶನ್ ಪಡೆದ ಪೊಲೀಸರು

ಬೆಂಗಳೂರು: ನಗರದಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯಿಂದ ಪೊಲೀಸರು ಡೈಯಿಂಗ್ ಡಿಕ್ಲರೇಶನ್ ಪಡೆದಿದ್ದಾರೆ.

ಶುಕ್ರವಾರ ಮಧ್ಯಾಹ್ನ ಆಸ್ಪತ್ರೆ ಬಳಿ ತೆರಳಿದ ಪೊಲೀಸರು ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್(ತಹಶೀಲ್ದಾರ್) ಸಮ್ಮುಖದಲ್ಲಿ ಯುವತಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಆ್ಯಸಿಡ್ ದಾಳಿಕೋರ ಯಾರು? ಎಷ್ಟೊತ್ತಿಗೆ ಘಟನೆ ನಡೆಯಿತು? ದಾಳಿ ಮಾಡಿದ್ದು ಹೇಗೆ? ಆ್ಯಸಿಡ್ ಯಾವುದರಲ್ಲಿ ತಂದಿದ್ದ? ಆ್ಯಸಿಡ್ ದಾಳಿಗೊಳಗಾದ ಬಳಿಕ ಏನಾಯಿತು? ದೇಹದ ಯಾವ ಭಾಗಗಳು ಆ್ಯಸಿಡ್‍ನಿಂದ ಗಾಯಗಳಾಗಿವೆ? ಹೀಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಯುವತಿ ಉತ್ತರ ನೀಡಿದ್ದಾಳೆ. ಇದನ್ನೂ ಓದಿ:  ಮರು ಪರೀಕ್ಷೆ ನಡೆದರೆ ಜ್ಞಾನೇಂದ್ರರಂತಹ ಅಸಮರ್ಥರು ಪಿಎಸ್‍ಐಗಳಾಗಿ ನೇಮಕಗೊಂಡರೂ ಆಶ್ಚರ್ಯ ಇಲ್ಲ: ಸಿದ್ದು

ವ್ಯಕ್ತಿ ಸಾಯುವ ಮುನ್ನ ತನ್ನ ಸಾವಿಗೆ ಕಾರಣವನ್ನು ತಿಳಿಸುವುದನ್ನು ಡೈಯಿಂಗ್ ಡಿಕ್ಲರೇಶನ್ ಸ್ಟೇಟ್‍ಮೆಂಟ್ ಎಂದು ಕರೆಯಲಾಗುತ್ತದೆ. ಇದು ಬಲವಾದ ಸಾಕ್ಷ್ಯವಾಗಿ ಆರೋಪಿಗೆ ಶಿಕ್ಷೆ ನೀಡಲು ಸಹಕಾರಿಯಾಗುತ್ತದೆ. ಸದ್ಯ ಪೊಲೀಸರು ಯುವತಿಯಿಂದ ಪಡೆದ ಸ್ಟೇಟ್‍ಮೆಂಟ್‍ಗೆ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್‍ನಿಂದ ಸಹಿ ಪಡೆದುಕೊಂಡಿದ್ದಾರೆ. ಒಟ್ಟಾರೆ ಸೆಂಟ್‍ಜಾನ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಯುವತಿ ಗುಣಮುಖರಾಗಿ ಬರಲಿ ಎಂಬುದು ಎಲ್ಲರ ಆಶಯವಾಗಿದೆ. ಇದನ್ನೂ ಓದಿ: ಕೇವಲ ಮುಸ್ಲಿಮರನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದೀರಾ – ಬಿಜೆಪಿಗೆ ಸಿದ್ದು ಪ್ರಶ್ನೆ

Leave a Reply

Your email address will not be published.

Back to top button