– 500 ಕೋಟಿ ರೂ., ಲಾರೆನ್ಸ್ ಬಿಷ್ಣೋಯ್ ಬಿಡುಗಡೆಗೆ ಬೇಡಿಕೆ
ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಹತ್ಯೆ ಮಾಡುವುದಾಗಿ ಹಾಗೂ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣವನ್ನು (Narendra Modi Stadium) ಸ್ಫೋಟಿಸುವುದಾಗಿ ಭಯೋತ್ಪಾದಕರು ಮುಂಬೈ ಪೊಲೀಸರಿಗೆ ಇಮೇಲ್ ಬೆದರಿಕೆ ಹಾಕಿದ್ದು, ಭಾರತೀಯ ಭದ್ರತಾ ಏಜೆನ್ಸಿಗಳು ಹೈ ಅಲರ್ಟ್ ಆಗಿವೆ.
ರಾಷ್ಟ್ರೀಯ ತನಿಖಾ ದಳ (NIA) ಮತ್ತು ಮುಂಬೈ ಪೊಲೀಸರಿಗೆ (Mumbai Police) ಬೆದರಿಕೆ ಮೇಲ್ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಗುಜರಾತ್ ಪೊಲೀಸರು ಹಾಗೂ ಪ್ರಧಾನಿಯ ಭದ್ರತೆಗೆ ಸಬಂಧಿಸಿದ ವಿವಿಧ ಏಜೆನ್ಸಿಗಳೊಂದಿಗೂ ಮಾಹಿತಿ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್ ಕಿರೀಟ ಧರಿಸಿದ ಭಾರತ
Advertisement
Advertisement
ಬೆದರಿಕೆ ಇಮೇಲ್‌ನಲ್ಲಿ, ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನನ್ನ (Lawrence Bishnoi) ಬಿಡುಗಡೆ ಮಾಡಬೇಕು, ಜೊತೆಗೆ 500 ಕೋಟಿ ರೂ. ನೀಡಬೇಕು. ಇಲ್ಲವಾದರೆ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡಲಾಗುವುದು. ಅಷ್ಟೇ ಅಲ್ಲದೇ ಅಹಮದಾಬಾದ್‌ನ (Ahmedabad) ಮೋದಿ ಕ್ರೀಡಾಂಗಣವನ್ನು ಸ್ಫೋಟಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಇದನ್ನೂ ಓದಿ: Asian Games 2023: ಜಪಾನ್ ಮಣಿಸಿ ಚಿನ್ನದ ಹಾರ ʻಹಾಕಿʼಕೊಂಡ ಭಾರತ – ಪ್ಯಾರಿಸ್ ಒಲಿಂಪಿಕ್ಸ್‌ಗೆ ಗ್ರೀನ್ ಸಿಗ್ನಲ್!
Advertisement
Advertisement
ಈ ಬಗ್ಗೆ ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಎನ್‌ಐಎ ಕಚೇರಿಯಿಂದ ಎಚ್ಚರಿಕೆ ಸಂದೇಶ ಬಂದಿದ್ದು, ಇಮೇಲ್ ಮೂಲ ಪತ್ತೆ ಹಚ್ಚಲು ಭದ್ರತಾ ಏಜೆನ್ಸಿಗಳು ಮುಂದಾಗಿವೆ. ಈಗಾಗಲೇ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 5 ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನೂ ಆಯೋಜಿಸಿರುವುದರಿಂದ ಮುಂಬೈನಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಅಷ್ಟೇ ಅಲ್ಲದೇ ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಉದ್ಘಾಟನಾ ಪಂದ್ಯ ನಡೆದಿದ್ದು, ಇನ್ನೂ ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ. ಇದನ್ನೂ ಓದಿ: ಕನ್ನಡ ಮಾತು ಕೇಳಿ ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟ ರಚಿನ್ – ಬೆಂಗ್ಳೂರು ವಿಲ್ಸನ್ ಗಾರ್ಡನ್ ನೆನಪು ಹಂಚಿಕೊಂಡ ರವೀಂದ್ರ
ಅ.14 ರಂದು ಭಾರತ ಮತ್ತು ಪಾಕಿಸ್ತಾನ, ನವೆಂಬರ್ 4 ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ, ನವೆಂಬರ್ 10 ರಂದು ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಹಾಗೂ ನವೆಂಬರ್ 19 ರಂದು ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಆದ್ದರಿಂದ ಮೋದಿ ಕ್ರೀಡಾಂಗಣಕ್ಕೂ ಹೆಚ್ಚಿನ ಭದ್ರತೆ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ. ಇದನ್ನೂ ಓದಿ: ಆಂಗ್ಲರ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಬೆಂಗ್ಳೂರು ಮೂಲದ ರಚಿನ್ ರವೀಂದ್ರ ಯಾರು ಗೊತ್ತಾ?
ಬೆದರಿಕೆ ಮೇಲ್‌ನಲ್ಲಿ ಬಂದ ಸಂದೇಶವೇನು?
ನಿಮ್ಮ ಸರ್ಕಾರ ನಮಗೆ 500 ಕೋಟಿ ರೂ. ನೀಡಬೇಕು. ಲಾರೆನ್ಸ್ ಬಿಷ್ಣೋಯ್‌ನನ್ನು ಬಿಡುಗೆ ಮಾಡಬೇಕು. ಇಲ್ಲವಾದರೆ ನಾವು ನರೇಂದ್ರ ಮೋದಿ ಹತ್ಯೆ ಮಾಡುತ್ತೇವೆ ಮತ್ತು ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಸ್ಫೋಟಿಸುತ್ತೇವೆ. ಹಿಂದೂಸ್ತಾನದಲ್ಲಿ ಎಲ್ಲವೂ ಮಾರಾಟವಾಗುತ್ತದೆ. ಹಾಗಾಗಿ ನಾವೂ ಇದನ್ನು ಖರೀದಿಸಲು ನಿರ್ಧರಿಸಿದ್ದೇವೆ. ನೀವು ಎಷ್ಟೇ ಭದ್ರತೆ ಪಡೆದುಕೊಂಡರೂ ನಮ್ಮಿಂದ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಇಮೇಲ್ ಸಂದೇಶ ಬಂದಿದೆ.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ 2014ರಿಂದ ಜೈಲಿನಲ್ಲಿದ್ದಾನೆ. ಜೈಲಿನ ಒಳಗಿನಿಂದಲೇ ತನ್ನ ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಪಂಜಾಬಿನಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.
Web Stories