ಕಾರವಾರ: ರೇವ್ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ವಿದೇಶಿಗರು ಸೇರಿ ಮೂವರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ನಡೆದಿದೆ.
ಅರಣ್ಯದಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಮಾದಕವಸ್ತುಗಳಾದ ಚರಸ್ ಹಾಗೂ ಕೆಟೋಮಿನ್ ಇಟ್ಟುಕೊಂಡಿದ್ದ ಇಸ್ರೇಲ್ ಮೂಲದ ಗೆಲ್‍ಸೆಲ್ ಮನ್(30), ಪಿಂಟೋ(30) ಹಾಗೂ ಕಾಸರಗೋಡು ಮೂಲದ ಗೋಕರ್ಣದ ರೆಗ್ಯುಲರ್ ರೆಸಾರ್ಟ್ ನಲ್ಲಿ ಕೆಲಸ ಮಾಡುವ ಇರ್ಫಾನ್ ಎಂಬವರನ್ನು ಬಂಧನ ಮಾಡಲಾಗಿದೆ.
Advertisement
Advertisement
ಕುಡ್ಲೆ ಕಡಲ ತೀರದ ರೆಗ್ಯೂಲಸ್ ರೆಸಾರ್ಟ್ ಹಾಗೂ ಅರಣ್ಯವೊಂದರಲ್ಲಿ ಪಾರ್ಟಿ ನಡೆಸಲಾಗುತಿತ್ತು. ರಾತ್ರಿ ವೇಳೆ ನಡೆಸುತ್ತಿದ್ದ ಪಾರ್ಟಿಯ ಮೇಲೆ ದಾಳಿ ನಡೆಸಲಾಗಿದೆ. ಈ ಪಾರ್ಟಿಯಲ್ಲಿ ಮಾದಕದ್ರವ್ಯ ಹಾಗೂ ಮಾದಕ ವಸ್ತುಗಳನ್ನ ಬಳಸಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.
Advertisement
ಎರಡು ಕಡೆ ಪಾರ್ಟಿಯಲ್ಲಿ ಬಳಸಿದ್ದ ಮದ್ಯ, ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಸೌಂಡ್ ಸಿಸ್ಟಮ್ ಗಳನ್ನ ವಶಕ್ಕೆ ಸಹ ಪಡೆಯಲಾಗಿದೆ. ಗೋಕರ್ಣದ ಸಿಪಿಐ ಸಂತೋಷ್ ಶಟ್ಟಿ, ಪಿ.ಎಸ್,ಐ ಸಂತೋಷ್, ಅಂಕೋಲದ ಪಿಎಸ್‍ಐ ನೇತೃತ್ವದಲ್ಲಿ ದಾಳಿ ನಡೆದಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv