ಬೆಂಗಳೂರು: ನಕಲಿ ತುಪ್ಪ ತಯಾರಿಸುವ ಜಾಲ ಒಂದಾದ ಮೇಲೆ ಒಂದು ಬೆಳಕಿಗೆ ಬರುತ್ತಲೇ ಇವೆ. ಮೈಸೂರಿನ ಬಳಿಕ ಇದೀಗ ಬೆಂಗಳೂರಿನಲ್ಲೂ ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ನಿಮ್ಮ ಮನೆಯಲ್ಲಿರುವುದು ಅಸಲಿ ತುಪ್ಪನಾ ಅಥವಾ ನಕಲಿ ತುಪ್ಪನಾ ಎಂಬುದನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಏಕೆಂದರೆ ಶುದ್ಧ ನಂದಿನ ಬ್ರಾಂಡ್‌ನ ಲೇಬಲ್ ಹಾಕಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಆಫ್‍ಲೈನ್ ಕ್ಲಾಸ್‍ಗೆ ಹೋಗು ಅಂದಿದ್ದಕ್ಕೆ ಹುಡುಗಿ ಆತ್ಮಹತ್ಯೆ
Advertisement
Advertisement
ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ವ್ಯಾಪ್ತಿಯ ಬೈಯಂಡಳ್ಳಿಯಲ್ಲಿ ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಬಾಬುಲಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಬಾಬುಲಾಲ್ ಈ ಹಿಂದೆ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ ಮಾಡಿ, ನಷ್ಟ ಅನುಭವಿಸಿದ್ದ. ಬಳಿಕ ತುಪ್ಪದ ದಂಧೆ ಪ್ರಾರಂಭಿಸಿದ್ದ. ಪೊಲೀಸರು ದಾಳಿ ನಡೆಸಿದಾಗ 15 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತು ಹಾಗೂ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಕಂಪನಿಯನ್ನಾಗಿ ನಿರ್ಮಿಸಿ – ಉದ್ಯೋಗಿಗಳ ಜೊತೆ ಚಂದ್ರಶೇಖರ್ ಮಾತು
ನೆಲಮಂಗಲ ಉಪವಿಭಾಗದ ಡಿಐಎಸ್‌ಪಿ ಗೌತಮ್, ಸಿಪಿಐ ಮಂಜುನಾಥ್ ಹಾಗೂ ಇತರ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.