ಚಿಂತಾಮಣಿ ಮನೆಯ ಮೇಲೆ ಪೊಲೀಸ್‌ ದಾಳಿ – ಹುಲಿ ಉಗುರು ಪತ್ತೆ, ಯುವಕ ನಾಪತ್ತೆ

Public TV
1 Min Read
Police raid on Chintamani house Tiger claw found youth missing

ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ಸೂಲದೇನಹಳ್ಳಿ ಗ್ರಾಮದ ಮನೆಯೊಂದರ ಮೇಲೆ ಪೊಲೀಸರು ದಾಳಿ (Police Raid) ಮಾಡಿ ಹುಲಿ ಉಗುರನ್ನು (Tiger Claw) ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ನವೀನ್ ಎಂಬವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮನೆಯ ಮೇಲಿನ ಕೊಠಡಿಯಲ್ಲಿ ಹುಲಿ ಉಗುರು ಮಾದರಿಯ ವಸ್ತು ಪತ್ತೆಯಾಗಿದೆ.  ಇದನ್ನೂ ಓದಿ: ಇಲ್ಲೇ ಇದ್ದು ಉತ್ತರ ಪ್ರದೇಶದ ಮೊಬೈಲ್ ಲೊಕೇಶನ್ – ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಆರ್.ಡಿ ಪಾಟೀಲ್

 

ಪತ್ತೆಯಾದ ವಸ್ತುವನ್ನು ಪೊಲೀಸರು ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ.‌ ಚಿಂತಾಮಣಿ ವಲಯ ಅರಣ್ಯಾಧಿಕಾರಿ ಚಂದನ್ ಈಗ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಪರಾರಿಯಾಗಿರುವ ನವೀನ್‌ಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

Share This Article