ಚಿತ್ರದುರ್ಗ: ಯುಗಾದಿ (Ugadi) ಪ್ರಯುಕ್ತ ಚಿತ್ರದುರ್ಗದ (Chitradurga) ವಿವಿಧೆಡೆ ಜೂಜಾಟದಲ್ಲಿ ತೊಡಗಿದ್ದ 575 ಜೂಜುಕೋರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಒಟ್ಟು 108 ಪ್ರಕರಣಗಳು ದಾಖಲಾಗಿದ್ದು, 7.40 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆ ಅನೇಕರು ಜೂಜಾಟದಲ್ಲಿ (Gambling) ತೊಡಗಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು 575 ಜೂಜುಕೋರರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ – ಆಡಿಯೋದಲ್ಲಿ ಮಾತನಾಡಿರುವ ಪುಷ್ಪಾ ಯಾರು? ಹಿನ್ನೆಲೆ ಏನು?
ಜೂಜಾಟದಲ್ಲಿ ತೊಡಗಿದ್ದವರ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಯಾರೆಲ್ಲ ಹೊಸ ಪಕ್ಷ ಕಟ್ಟಿದ್ದರು? ರಚನೆ ಮಾಡಿದ್ದು ಯಾಕೆ? ಕೊನೆಗೆ ಏನಾಯ್ತು?