ಬೆಂಗಳೂರು: ಪೊಲೀಸ್ (Police) ಅಧಿಕಾರಿಗಳು ಇನ್ಮುಂದೆ ವಾಟ್ಸಪ್ ಡಿಪಿಗೆ ಅವರ ಫೋಟೋ (Photo) ಹಾಕಿಕೊಳ್ಳುವಂತಿಲ್ಲ ಎಂದು ಬೆಂಗಳೂರಿನ (Bengaluru) ಆಗ್ನೇಯ ವಿಭಾಗದಲ್ಲಿ ಹೊಸ ನಿಯಮ ಜಾರಿಯಾಗಿದೆ.
ಸಿಂಗಂ ರೀತಿ ವಾಟ್ಸಪ್ ಡಿಪಿಗಳಲ್ಲಿ ಪೊಲೀಸ್ ಅಧಿಕಾರಿಗಳು ಡಿಪಿ ಹಾಕಿಕೊಳ್ಳುತ್ತಾರೆ. ಆದರೆ ಸಾರ್ವಜನಿಕರ ಫೋನ್ ರಿಸಿವ್ ಮಾಡಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾರಿಂದ ಹೊಸ ಆದೇಶ ಮಾಡಲಾಗಿದೆ. ಇಂದಿನಿಂದ ಪೊಲೀಸ್ ಅಧಿಕಾರಿಗಳು ಸರ್ಕಾರಿ ನಂಬರ್ಗಳಿಗೆ ತಮ್ಮ ಪೋಟೋ ಡಿಪಿ ಹಾಕಿಕೊಳ್ಳಬಾರದು. ಬದಲಾಗಿ ಲೋಕಸ್ಪಂದನ ಅನ್ನೋ ಕ್ಯೂ ಆರ್ ಕೋಡ್ ಹಾಕಿಕೊಳ್ಳಬೇಕು. ಇದನ್ನೂ ಓದಿ: ಮೀನೂಟ ಸವಿದು ದೇವರ ದರ್ಶನ ಮಾಡಿದ ಸಿ.ಟಿ ರವಿ ಫೋಟೋ ವೈರಲ್
Advertisement
Advertisement
ಒಂದು ವೇಳೆ ಅಧಿಕಾರಿ ಪೋನ್ ರಿಸಿವ್ ಮಾಡಿಲ್ಲ, ದೂರಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಅಂದರೆ, ಅಧಿಕಾರಿಯ ಡಿಪಿಯಲ್ಲಿರುವ ಲೋಕಸ್ಪಂದನ ಕ್ಯೂ ಆರ್ ಕೊಡ್ಗೆ ಸ್ಕ್ಯಾನ್ ಮಾಡಿ ದೂರು ನೀಡಬಹುದು. ಅದು ನೇರವಾಗಿ ಡಿಸಿಪಿ ಫೋನ್ ನಂಬರ್ಗೆ ಮಸೇಜ್ ಹೋಗುತ್ತದೆ. ಈ ರೀತಿಯ ಹೊಸದೊಂದು ನಿಯಮ ಜಾರಿ ಮಾಡಿ ಅಧಿಕಾರಿಗಳನ್ನು ನಿಷ್ಠೆಯಿಂದ ಕೆಲಸ ಮಾಡುವಂತೆ ಮಾಡುವುದು ಇದರ ಉದ್ದೇಶ ವಾಗಿದೆ. ಇದು ಎಷ್ಟರಮಟ್ಟಿಗೆ ಪರಿಣಾಮ ಬಿರುತ್ತದೆ ಕಾದುನೋಡಬೇಕಿದೆ. ಇದನ್ನೂ ಓದಿ: ಕೆಆರ್ಪುರಂ-ವೈಟ್ಫೀಲ್ಡ್ ನಡುವಿನ ಮೆಟ್ರೋ ಸಂಚಾರಕ್ಕೆ ಶೀಘ್ರದಲ್ಲೇ ಗ್ರೀನ್ ಸಿಗ್ನಲ್
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k