ಸ್ಯಾಂಡಲ್‌ವುಡ್ ನಟ ದರ್ಶನ್ ನಟನೆಯ ‘ಕರಿಯಾ’ (Kariya) ಸಿನಿಮಾ ಇಂದು (ಆ.30) ರಾಜ್ಯಾದ್ಯಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇನ್ನೂ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಬಳಿ ದರ್ಶನ್ ಅಭಿಮಾನಿಗಳು (Fans) ಪುಂಡಾಟಿಕೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ:ಪ್ರೀತಿ ಅಂದರೆ ಕಮಿಟ್‌ಮೆಂಟ್: ಲೈಫ್ ಪಾರ್ಟ್ನರ್ ಬಗ್ಗೆ ರಂಜನಿ ರಾಘವನ್ ಓಪನ್ ಟಾಕ್
ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ಬಳಿ ಪುಂಡಾಟಿಕೆ ಮಾಡುತ್ತಿದ್ದ ಅಭಿಮಾನಿಗಳಿಗೆ ಪೊಲೀಸರು ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾಧ್ಯಮಗಳ ವಿರುದ್ಧ ಘೋಷಣೆ ಕೂಗುತ್ತಿದ್ದವರಿಗೆ ನಿಮ್ಮಂತಹ ಅಭಿಮಾನಿಗಳಿಂದಲೇ ದರ್ಶನ್‌ಗೆ ಕೆಟ್ಟ ಹೆಸರು ಎಂದು ಪೊಲೀಸರು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಅಂದಹಾಗೆ, 2003ರಲ್ಲಿ ‘ಕರಿಯಾ’ ಸಿನಿಮಾ ರಿಲೀಸ್ ಆಗಿತ್ತು. ಇದನ್ನೂ ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದರು. ದರ್ಶನ್ ನಟನೆ ಮತ್ತು ಕಥೆ ಎರಡು ಜನರ ಮನಗೆದ್ದಿತ್ತು.