ಮಡಿಕೇರಿ: ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ದಿನ ಅವರ ಕೊನೆಯ ಚಿತ್ರ ‘ಜೇಮ್ಸ್’ ವಿಶ್ವದ್ಯಾಂತ ತೆರೆಕಂಡು ಭರ್ಜರಿ ಪ್ರದರ್ಶನಗೊಳ್ಳುತ್ತಿದೆ. ಪುನೀತ್ ರಾಜ್‍ಕುಮಾರ್ ಅವರನ್ನು ‘ಜೇಮ್ಸ್’ ಸಿನಿಮಾದಲ್ಲಿ ನೋಡಿ ಅಭಿಮಾನಿಗಳು ಭಾವುಕವಾಗುತ್ತಿರುವುದು ಸಾಮಾನ್ಯವಾಗಿದೆ. ಇಲ್ಲೊಬ್ಬ ವೃತ್ತಿ ನಿರೀಕ್ಷಕ ಮಹೇಶ್ ಸಹ ಅವರೊಂದಿಗಿನ ಒಡನಾಟ ನೆನಪಿಸಿಕೊಂಡು ಭಾವುಕರಾಗಿ ಹಾಡುವ ಮೂಲಕ ಅಪ್ಪುಗೆ ನಮನ ಸಲ್ಲಿಸಿದ್ದಾರೆ.
Advertisement
ಅಪ್ಪು ಅಗಲಿ ನಾಲ್ಕು ತಿಂಗಳು ಕಳೆದ್ರು ಅಪ್ಪುವಿನ ಮೇಲೆ ಅಭಿಮಾನಿಗಳು ಇಟ್ಟಿರುವ ಪ್ರೀತಿ ಕಡಿಮೆಯಾಗಿಲ್ಲ. ಅವರನ್ನು ಕಳೆದುಕೊಂಡ ಮೇಲೆ ಪೆÇಲೀಸ್ ಅಧಿಕಾರಿಗೆ ಅಪ್ಪು ಮಾಡಿರುವ ಸಮಾಜಸೇವೆ ನೆನೆದು ಭಾವುಕರಾಗಿ ಡಾ.ರಾಜ್‍ಕುಮಾರ್ ಹಾಡಿರುವ ರೀತಿಯಲ್ಲಿಯೇ ಹಾಡನ್ನು ಹಾಡಿ ಅಚ್ಚರಿ ಮೂಡಿಸಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದ ವೃತನೀರಿಕ್ಷಕರಾಗಿ ಕರ್ತವ್ಯ ಮಾಡುತ್ತಿರುವ ಮಹೇಶ್ ದೇವರು, ಪುನೀತ್ ರಾಜ್‍ಕುಮಾರ್ ಬಗ್ಗೆ ಅಪಾರವಾದ ಗೌರವ ಹಾಗೂ ಅಭಿಮಾನ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?
Advertisement
Advertisement
ಪುನೀತ್ ರಾಜ್‍ಕುಮಾರ್ ಕೊನೆ ಚಿತ್ರ ‘ಜೇಮ್ಸ್’ ದೃಶ್ಯಗಳನ್ನು ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಮಹೇಶ್ ಅವರು ಸ್ಥಳದಲ್ಲಿ ಇದ್ದರು. ಈ ವೇಳೆ ಅಪ್ಪು ಅವರೊಂದಿಗೆ ಒಂದಷ್ಟು ಸಮಯ ಕಳೆದಿದ್ದಾರೆ. ಆ ನೆನಪು ಇಂದಿಗೂ ಅವರನ್ನು ಕಾಡುತ್ತಿದೆ.
Advertisement
ಪ್ರಸ್ತುತ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಬಗ್ಗೆ ಇಟ್ಟಿರುವ ಅಭಿಮಾನ ಕಂಡ ಪೆÇಲೀಸ್ ಅಧಿಕಾರಿ ಮಹೇಶ್ ದೇವರು ‘ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ, ಇಂದು ಮಾತನಾಡಿದೆ ಪ್ರೀತಿ ಮೌನವಾಗಿದೆ. ನೀನೆ ಜೀವ ಜೀವನ ನೀನೆ ಪ್ರೇಮ ಕಾರಣ’ ಎಂದು ಸಾಂಗ್ ಹಾಡುವ ಮೂಲಕ ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್
ಮಹೇಶ್ ಅವರು ಹಾಡಿರುವ ಈ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಅಗುತ್ತಿದೆ.