ಮೈಸೂರು: ಶುಕ್ರವಾರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ವಿಜಯದಶಮಿ ಜಂಬೂ ಸವಾರಿ ವೇಳೆ ಪೊಲೀಸ್ ಅಧಿಕಾರಿಗಳು ಸಯ್ಯಾಜಿರಾವ್ ರಸ್ತೆಯಲ್ಲಿ ಅಂಧಾ ದರ್ಬಾರ್ ನಡೆಸಿದ್ದಾರೆ.
ಅಂಬಾರಿ ಹೊತ್ತ ಅರ್ಜುನ ಮುಂದೆ ಪೊಲೀಸ್ ಅಧಿಕಾರಿ ಹಾಗೂ ಅವರ ಸಹದ್ಯೋಗಿ ಪೊಲೀಸರು ಫೋಟೋ ತೆಗೆಸಿಕೊಳ್ಳುವುದ್ದಕ್ಕೆ ರಸ್ತೆ ಮಧ್ಯೆ ಅರ್ಜನನ್ನು ನಿಲ್ಲಿಸಿದ್ದಾರೆ. ಅಂಬಾರಿ ಹೊತ್ತು ಸಾಗುತ್ತಿದ್ದ ಅರ್ಜುನನ್ನು ಬಲವಂತವಾಗಿ ನಿಲ್ಲಿಸಿ ಫೋಟೋ ತೆಗೆಸಿಕೊಂಡಿದ್ದಾರೆ.
Advertisement
Advertisement
ಪೊಲೀಸ್ ಅಧಿಕಾರಿ ಸೂಚನೆಯಂತೆ ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನನ ದಂತ ಹಿಡಿದು ಎಳೆದು ನಿಲ್ಲಿಸಿದ್ದಾರೆ. ಸಾಮಾನ್ಯವಾಗಿ ಅಂಬಾರಿ ಹೊತ್ತ ಅರ್ಜುನ ದಾರಿ ಮಧ್ಯೆ ನಿಲ್ಲುವುದಿಲ್ಲ. ಆದರೆ ಫೋಟೋ ಹುಚ್ಚಿಗಾಗಿ ಅಂಬಾರಿ ಆನೆಯನ್ನೇ ನಿಲ್ಲಿಸಿ ಅರ್ಜುನನಿಗೆ ಕಿರಿಕಿರಿ ಉಂಟು ಮಾಡಿದ್ದಾರೆ.
Advertisement
ಪೊಲೀಸರ ಅಂದ ದರ್ಬಾರ್ ಸ್ಥಳಿಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರೇ ಇದೇನಾ ನಿಮ್ಮ ಶಿಸ್ತು? ಖಾಕಿ ಹಾಕಿಕೊಂಡು ಪೊಲೀಸರು ಏನ್ ಬೇಕಾದರೂ ಮಾಡಬಹುದಾ? ಇದು ಜಂಬೂಸವಾರಿಯಾ? ಅಥವಾ ಪೊಲೀಸ್ ಸವಾರಿಯಾ? ಎಂದು ಜನ ಪ್ರಶ್ನಿಸಿ ತರಾಟೆಗೆ ತೆಗದುಕೊಳ್ಳುತ್ತಿದ್ದಾರೆ.
Advertisement
https://www.youtube.com/watch?v=U3wetUpNpe0
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv