ಬೀಜಿಂಗ್: ಪೊಲೀಸ್ ಅಧಿಕಾರಿಯೊಬ್ಬರು ಬೆಂಕಿ ಹೊತ್ತಿ ಉರಿಯುತ್ತಿದ್ದ ಗ್ಯಾಸ್ ಸಿಲಿಂಡರನ್ನು ಬರಿಗೈಯ್ಯಲ್ಲೇ ಕಟ್ಟಡದಿಂದ ಧರಧರನೆ ಹೊರಗೆಳೆದು ತಂದ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
ಇಲ್ಲಿನ ಜಿಯಾಂಗ್ಸು ಪ್ರದೇಶದ ಮನೆಯೊಂದರಲ್ಲಿ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‍ಗೆ ಬೆಂಕಿ ಹೊತ್ತಿಕೊಂಡಿತ್ತು. ವಿಷಯ ತಿಳಿದು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದ್ರು. ತೇವವಾದ ಟವೆಲ್‍ನಿಂದ ಮೂಗು ಮುಚ್ಚಿಕೊಂಡು ಒಳಹೋದ ಅಧಿಕಾರಿಗಳಿಗೆ ಬೆಂಕಿ ಹೊತ್ತಿ ಉರಿಯುತ್ತಿದ್ದ ಸಿಲಿಂಡರ್ ಕಾಣಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ಬರುವವರೆಗೂ ಕಾಯುವಷ್ಟು ಸಮಯವಿಲ್ಲ ಎಂದು ಯೋಚಿಸಿ ಯುವ ಅಧಿಕಾರಿ ಯೇಓರು ಸಿಲಿಂಡರನ್ನು ಕಟ್ಟಡದಿಂದ ಹೊರಗೆ ತೆಗೆದುಕೊಂಡು ಹೋಗಬೇಕು ಎಂದು ನಿರ್ಧರಿಸಿದ್ರು.
Advertisement
ಕೆಲವೇ ನಿಮಿಷಗಳಲ್ಲಿ ಯೇಓರು ತೇವವಾದ ಟವೆಲನ್ನು ಕೈಗೆ ಸುತ್ತಿಕೊಂಡು ಬೆಂಕಿ ಹೊತ್ತಿ ಉರಿಯುತ್ತಿದ್ದ ಸಿಲಿಂಡರನ್ನು ಮಹಡಿಯಿಂದ ಧರಧರನೆ ಎಳೆದುತಂದರು. ಗ್ಯಾಸ್ ಸಿಲಿಂಡರ್‍ನ ತೂಕದಿಂದ ಆಯಾಸವಾಗಿ ಅವರು ಅಲ್ಲಲ್ಲಿ ನಿಲ್ಲುವುದನ್ನು ವೀಡಿಯೋದಲ್ಲಿ ನೋಡಬಹುದು.
Advertisement
ಸಿಲಿಂಡರ್ ಹೊರಗೆಳೆದು ತಂದ ಯೇಓರು ಅವರ ಕೈಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರ ಸಮವಸ್ತ್ರ ಕೂಡ ಸ್ವಲ್ಪ ಮಟ್ಟಿಗೆ ಸುಟ್ಟುಹೋಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಯೇಓರು, ನನಗೆ ಆ ಸಂದರ್ಭದಲ್ಲಿ ಏನು ಮಾಡಬೇಕು ಅನ್ನಿಸ್ತೋ ಅದನ್ನು ಮಾಡಿದೆ ಎಂದು ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
Advertisement
ಯೇಓರು ಪೊಲೀಸ್ ಅಧಿಕಾರಿಯಾಗಿ ಕೆಲಸಕ್ಕೆ ಸೇರಿ ಕೇವಲ ಒಂದು ವರ್ಷವಷ್ಟೇ ಆಗಿದೆ ಎಂದು ವರದಿಯಾಗಿದೆ.