ಶಿವಮೊಗ್ಗ: ಜಿಲ್ಲೆಯ ವೀರಣ್ಣನ ಬೆನವಳ್ಳಿ ಗ್ರಾಮದ ವಿವಾದಿತ ಜಾಗದಲ್ಲಿ ಟೆಂಟ್ ನಿರ್ಮಿಸಿಕೊಂಡಿದ್ದ ಹಕ್ಕಿ ಪಿಕ್ಕಿ ಜನಾಂಗದವರನ್ನು ಅಮಾನವೀಯವಾಗಿ ಮಹಿಳೆಯರನ್ನು ಎಳೆದಾಡಿ ಸ್ಥಳ ಖಾಲಿ ಮಾಡಿಸಿದ್ದಾರೆ.
ವೀರಣ್ಣನ ಬೆನವಳ್ಳಿ ಗ್ರಾಮದ ನೆಡುತೋಪಿನಲ್ಲಿರುವ 5 ಎಕರೆ ಭೂಮಿಯನ್ನು ಹಕ್ಕಿಪಿಕ್ಕಿ ಜನಾಂಗದವರಿಗೆ ಕಂದಾಯ ಇಲಾಖೆ ಮಂಜೂರು ಮಾಡಿತ್ತು. ಹೀಗಾಗಿ ಜಾಗದಲ್ಲಿ ಒಂದು ತಿಂಗಳ ಹಿಂದೆಯೇ ಹಕ್ಕಿ ಪಿಕ್ಕಿ ಜನಾಂಗದವರು 150 ಟೆಂಟ್‍ಗಳನ್ನು ನಿರ್ಮಿಸಿಕೊಂಡಿದ್ದರು. ಆದರೆ ಇದು ಗೋಮಾಳಕ್ಕೆ ಸೇರಿದ ಜಾಗ ಇದನ್ನು ಮಂಜೂರು ಮಾಡಬಾರದು. ಈಗಾಗಲೇ ನೆಲೆ ನಿಂತಿರುವ ಹಕ್ಕಿಪಿಕ್ಕಿ ಜನಾಂಗದವರನ್ನು ಸ್ಥಳಾಂತರಿಸಬೇಕೆಂದು ವೀರಣ್ಣನ ಬೆನವಳ್ಳಿ ಗ್ರಾಮಸ್ಥರು ಹೈಕೋರ್ಟ್ ನಿಂದ ಆದೇಶ ತಂದಿದ್ದರು.
Advertisement
ಇತ್ತ ಅರಣ್ಯ ಇಲಾಖೆ ಕೂಡಾ ಹಕ್ಕಿಪಿಕ್ಕಿ ಜನಾಂಗ ಇರುವ ಜಾಗ ತಮಗೆ ಸೇರಿದ್ದು ಎಂದು ವಾದಿಸಿತ್ತು. ಮಹಿಳೆಯರು ಎಷ್ಟೇ ಬೇಡಿಕೊಂಡರೂ, ಮಕ್ಕಳು ಅತ್ತರು ಲೆಕ್ಕಿಸದ ಅರಣ್ಯ ಇಲಾಖೆಯ ಪೊಲೀಸರು. ಮಹಿಳೆಯರನ್ನು ಎಳೆದು ಜಾಗ ಖಾಲಿ ಮಾಡಿಸಿ, ಟೆಂಟ್ ಮೇಲೆ ಹೊದೆಸಿದ್ದ ಹಾಳೆಗಳನ್ನು ಕಿತ್ತು ಹಾಕಿದ್ದಾರೆ. ಇತ್ತ ಜಾಗ ಖಾಲಿ ಮಾಡಲು ನಿರಾಕರಿಸಿದ ಹಕ್ಕಿಪಿಕ್ಕಿ ಜನಾಂಗದ ಪುರುಷರ ಮೇಲೆ ಹಲ್ಲೆ ಮಾಡಿ, 30ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.