ಬೀದರ್: ನಕ್ಸಲ್ ನಿಗ್ರಹ ಪಡೆಯ ಹೆಡ್ ಕಾನ್ ಸ್ಟೇಬಲ್ ಬೀದರ್ ಮೂಲದ ಬಿ.ಸುಶೀಲ್‍ಕುಮಾರ್ ಅವರ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಸ್ವಗ್ರಾಮ ಮಂಗಲಪೇಟೆಯಲ್ಲಿರುವ ಮೇಥೋಡಿಯಸ್ ಚರ್ಚ್ ಬಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.
Advertisement
ಶುಕ್ರವಾರ ತಡರಾತ್ರಿ ತೆಲಂಗಾಣ-ಛತ್ತೀಸ್‍ಗಢ ಗಡಿಯಲ್ಲಿ ನಕ್ಸಲ್ ಕಾರ್ಯಾಚರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಾವೋ ನಕ್ಸಲ್ ದಮನದಲ್ಲಿ ಬೀದರ್‍ನ ಮೂಲದ ಪೊಲೀಸ್ ಪೇದೆ ಬಿ ಸುಶೀಲ್‍ಕುಮಾರ್ ಹುತಾತ್ಮನಾಗಿದ್ದರು. ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಬಿ. ಸುಶೀಲ್‍ಕುಮಾರ್ ಪಾರ್ಥಿವ ಶರೀರ ವಿಶೇಷ ಆಂಬುಲೆನ್ಸ್ ಮೂಲಕ ಬೀದರ್ ನಗರದ ಗ್ರೇಸ್ ಕಾಲೋನಿಯ ನಿವಾಸಕ್ಕೆ ಬಂದು ತಲುಪಿತ್ತು.
Advertisement
Advertisement
ಹುತಾತ್ಮನ ಪಾರ್ಥಿವ ಶರೀರ ನಿವಾಸಕ್ಕೆ ಆಗಮಿಸುತ್ತಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು ಇಂದು ಬೀದರ್‍ನ ಮಂಗಲಪೇಟೆಯಲ್ಲಿರುವ ಮೇಥೋಡಿಯಸ್ ಚರ್ಚ್ ಬಳಿಯಲ್ಲಿ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆಗೆ ತೆಲಂಗಾಣ ಡಿಜಿಪಿ ಮಹೇಂದ್ರಕುಮಾರ್ ರೆಡ್ಡಿ ಬಂದು ಗೌರವ ಸಲ್ಲಿಸಿದ್ದಾರೆ.
Advertisement
ರಾಜ್ಯ ಹಾಗೂ ತೆಲಂಗಾಣ ಪೊಲೀಸ್ ರಿಂದ ಜಂಟಿ ಸಕಲ ಸರ್ಕಾರಿ ಗೌರವದೊಂದಿದೆ ಅಂತ್ಯಕ್ರಿಯೆ ನಡೆದಿದೆ. ಸಂಬಂಧಿಕರು ಹಾಗೂ ಪೊಲೀಸ್ ಬಾಂಧವರು ಭಾಗಿಯಾಗಿದ್ದರು.
ಬಿ.ಸುಶೀಲ್‍ಕುಮಾರ್ ತೆಲಂಗಾಣದ ಹೈದರಾವಾದ್ ನ ಗ್ರೇಹಹುಣ್ಸ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಕಾರ್ಯಾಚರಣೆಯಲ್ಲಿ 10 ಜನ ನಕ್ಸಲರನ್ನು ಹತ್ಯೆ ಮಾಡಲಾಗಿದೆ.