ಪೊಲೀಸ್ ಠಾಣೆಯಲ್ಲೇ ಎಣ್ಣೆ ಪಾರ್ಟಿ

Public TV
1 Min Read
drinks police kolar

ಕೋಲಾರ: ಪೊಲೀಸ್ ಠಾಣೆಯಲ್ಲೇ (Police Station) ಕುಳಿತು ಪೊಲೀಸ್ ಸಿಬ್ಬಂದಿ ಮದ್ಯಪಾನ (Drinks) ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಠಾಣೆಯ ಪೊಲೀಸ್ ಪೇದೆಗಳಾದ ಚಲಪತಿ, ಆಂಜಿ, ಹಾಗೂ ಮಂಜುನಾಥ್ ಮದ್ಯಪಾನ ಮಾಡುತ್ತಿರುವ ಸಿಬ್ಬಂದಿ ಆಗಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ ಪ್ರಕರಣ – ನಾಳೆಯಿಂದ 2 ದಿನ ವಿಶ್ವವಿದ್ಯಾಲಯ ಬಂದ್

police station

ಕೆಲಸದ ಸಮಯದಲ್ಲಿ ಎಣ್ಣೆ ಹಾಕಿ ಮಜಾ ಮಾಡುತ್ತಿರುವ ಸಿಬ್ಬಂದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ಸಿಬ್ಬಂದಿ ಪೊಲೀಸ್ ಠಾಣೆಯನ್ನೇ ಬಾರ್ ಆಗಿ ಪರಿವರ್ತಿಸಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೈಕಲ್‍ಗೆ ಬೈಕ್ ಡಿಕ್ಕಿ- ಪಲ್ಸರ್ ಸವಾರ ಸ್ಥಳದಲ್ಲೇ ಸಾವು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *