ಕಲಬುರಗಿ: ಮಹಾರಾಷ್ಟ್ರದಿಂದ ಕಲಬುರಗಿ ಬರುವ ಪ್ರಯಾಣಿಕರ ಲಸಿಕೆಗಳ ವಿವರಗಳನ್ನು ಪರಿಶೀಲಿಸದೇ ಅಧಿಕಾರಿಗಳು ಗಡಿ ದಾಟಲು ಬಿಟ್ಟಿರುವ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದಲ್ಲಿ ನಡೆದಿದೆ.
ಅಧಿಕಾರಿಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡಲು ಖಾಸಗಿ ವ್ಯಕ್ತಿಗಳ ನೇಮಕ ಮಾಡಿರುವುದು ತಿಳಿದು ಬಂದಿದೆ. ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಮತ್ತು ಲಸಿಕಾ ವರದಿ ಇಲ್ಲದಿದ್ದರೂ ಹಣ ಕೊಟ್ಟು ಗಡಿಯೊಳಗೆ ಬರಲು ಸಹಾಯ ಮಾಡಿದ್ದಾರೆ. ಜೊತೆಗೆ ಹಗಲಲ್ಲಿ ಬರುವ ಪ್ರಯಾಣಿಕರಿಗೆ ಒಂದು ರೇಟ್, ರಾತ್ರಿ ಹೊತ್ತಲ್ಲಿ ಬರುವ ಪ್ರಯಾಣಿಕರಿಗೆ ಮತ್ತೊಂದು ರೇಟ್ ಇಟ್ಟಿರುವುದು ತಿಳಿದುಬಂದಿದೆ. ಇದನ್ನೂ ಓದಿ: ರೇಷನ್ ಕಾರ್ಡ್ ಇದೆಯಾ: ಸ್ನಾನ ಮಾಡ್ತಿದ್ದ ವ್ಯಕ್ತಿ ಬಳಿ ಹೋಗಿ ಬಿಜೆಪಿ ಶಾಸಕನ ಪ್ರಶ್ನೆ
Advertisement
Advertisement
ಗುರುವಾರ ಒಂದೇ ದಿನ ಜಿಲ್ಲೆಯಲ್ಲಿ 346 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಕೊರೊನಾ ಹಾವಳಿಯ ಮಧ್ಯೆಯೂ ಪೊಲೀಸರು ಹಣ ವಸೂಲಿ ಮಾಡಿ ಗಡಿಯೊಳಗೆ ಬಿಟ್ಟಿರುವುದು ಆಘಾತಕಾರಿ ವಿಷಯ. ಇದನ್ನೂ ಓದಿ: ವಿಶೇಷ ವಿಕಲಚೇತನ ಅಪ್ಪು ಅಭಿಮಾನಿಯಿಂದ ಬೆಂಗಳೂರಿಗೆ ಪಾದಯಾತ್ರೆ