ಬೆಂಗಳೂರು: ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದ ಬಳಿಕ ಶೆಡ್‌ಗೆ (Pattanagere Shed) ಬೀಗ ಬಿದ್ದಿದೆ. ಫೈನಾನ್ಸ್ ನಲ್ಲಿ ಹಣ ಕಟ್ಟದೇ ಸೀಜ್ ಆದ ವಾಹನಗಳನ್ನ (Seized Vehicles) ಬಿಡಿಸಿಕೊಳ್ಳಲು ನಿತ್ಯ ಜನ ಶೆಡ್‌ಗೆ ಬರ್ತಿದ್ದಾರೆ. ಆದ್ರೆ ವಾಹನಗಳನ್ನ ಬಿಡಿಸಿಕೊಳ್ಳಲಾಗದೇ ವಾಪಾಸ್ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯದ ಜನ್ರನ್ನ ಬೆಚ್ಚಿಬೀಳಿಸಿದೆ. ಬೆಂಗಳೂರಿನ ಆರ್‌ಆರ್ ನಗರದ (Bengaluru RR Nagar) ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ ಎಂಬ ಸತ್ಯ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ʻದಾಸʼನಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿ – ಪೊಲೀಸರಿಂದ 2 ಹಲ್ಲೆ ವೀಡಿಯೋ ಸಂಗ್ರಹ!
ಈ ಶೆಡ್‌ನ ಬಾಡಿಗೆಗೆ ಫೈನಾನ್ಸ್ ಕಂಪನಿಯ (Finance Company) ನಿರ್ವಹಣೆ ಮಾಡ್ತಿದ್ದು, ಫೈನಾನ್ಸ್ ನಲ್ಲಿ ವಾಹನಗಳನ್ನ ಖರೀದಿಸಿ, ಕಟ್ಟೋಕೆ ಆಗದಿದ್ದಾಗ, ಅಂತಹ ವಾಹನಗಳನ್ನ ಸೀಜ್ ಮಾಡಿ ಇದೇ ಶೆಡ್‌ನಲ್ಲಿ ತುಂಬಿಸಲಾಗುತ್ತೆ. ಇಲ್ಲಿ ಸೀಜ್ ಆಗಿರೋ ನೂರಾರು ಬೈಕ್‌ಗಳು, ಆಟೋ, ಕಾರು, ಲಾರಿ, ಇತರೆ ವಾಹನಗಳಿವೆ. ಇವುಗಳನ್ನ ಮಾಲೀಕರು ಹಣ ಕಟ್ಟಿ ತಮ್ಮ ವಾಹನಗಳನ್ನ ಬಿಡಿಸಿಕೊಂಡು ಹೋಗಲು ಶೆಡ್‌ಗೆ ಬರ್ತಿದ್ದಾರೆ. ಆದ್ರೆ ರೇಣುಕಸ್ವಾಮಿ ಕೊಲೆ ವಿಚಾರಣೆ ಹಾಗೂ ಸಾಕ್ಷ್ಯ ನಾಶ ಆಗಬಾರದೆಂದು ಪೊಲೀಸರು ಶೆಡ್‌ಗೆ ಬೀಗ ಹಾಕಿದ್ದಾರೆ. ಹೀಗಾಗಿ ಫೈನಾನ್ಸ್ ಸಿಬ್ಬಂದಿ ಇತ್ತ ತಲೆ ಹಾಕಿಲ್ಲ. ನಿತ್ಯ ತಮ್ಮ ವಾಹನಗಳನ್ನ ಬಿಡಿಸಿಕೊಂಡು ಹೋಗಲು ಬಂದ ಮಾಲೀಕರು ಖಾಲಿ ಕೈಯಲ್ಲಿ ವಾಪಾಸ್ ಹೋಗ್ತಿದ್ದಾರೆ.
ಆಟೋ, ದ್ವಿಚಕ್ರ ವಾಹನಗಳಲ್ಲಿ ನಿತ್ಯ 15-20 ಜನ ಶೆಡ್‌ಗೆ ಬರ್ತಾರೆ. ಬ್ಯಾಂಕ್‌ನಲ್ಲಿ ಬಾಕಿಯಿರೋ ಹಣ ಕಟ್ಟಿ, ಇನ್ನೇನು ಬೈಕ್ ಬಿಡಿಸಿಕೊಂಡು ಬರೋಣ ಅಂತ ಎಲ್ಲ ದಾಖಲೆಗಳನ್ನ ಶೆಡ್ ಬಳಿ ತಂದ್ರೂ, ಸಿಬ್ಬಂದಿಯಿಲ್ಲದೇ ನಿರಾಸೆಯಿಂದ ವಾಪಾಸ್ ಆಗ್ತಿದ್ದಾರೆ.
ನಾವು ನಮ್ಮ ವಸ್ತುವನ್ನ ಬಿಡಿಸಿಕೊಳ್ಳೊಕೆ ಹೀಗೆ ಎಷ್ಟು ದಿನ ಓಡಾಡಬೇಕು? ಅಂತ ವಾಹನದ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ – ಸಂತ್ರಸ್ತನ ವಿರುದ್ಧವೇ ಕೇಸ್ ದಾಖಲು