ಬೆಂಗಳೂರು: ನಟ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ ಪ್ರಕರಣ ಸಂಬಂಧ ಮೂವರು ಮನೆ ಕೆಲಸದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮನೆ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿ ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಣ ಕಳವಾದ ದಿನ ಮನೆಯಲ್ಲಿ ಐವರು ಕೆಲಸದವರು ಇರೋದು ಪತ್ತೆಯಾಗಿದೆ. ಮೂವರು ಕೆಲಸಗಾರರು, ಮ್ಯಾನೇಜರ್ ನಾಗರಾಜ್ ಮತ್ತು ವಿಜಯಲಕ್ಷ್ಮಿ ತಾಯಿ ಕೂಡ ಮನೆಯಲ್ಲಿದ್ದರು. ಇದನ್ನೂ ಓದಿ: ಆರೋಪಿ ನಟ ದರ್ಶನ್ ಮನೆಯಲ್ಲಿ 3 ಲಕ್ಷ ನಗದು ಕಳ್ಳತನ
ಫ್ಲಾಟ್‌ನಲ್ಲಿ ಯಾವುದೇ ಸಿಸಿಟಿವಿ ಇಲ್ಲ. ಲಿಫ್ಟ್ ಮತ್ತು ಸೆಕ್ಯುರಿಟಿ ಗಾರ್ಡ್, ಗಾರ್ಡನ್ ಏರಿಯಾದ ಬಳಿ ಮಾತ್ರ ಸಿಸಿಟಿವಿ ಇದೆ. ಈ ಸಿಸಿಟಿವಿಯ ಪರಿಶೀಲನೆ ವೇಳೆ ಬೇರೆ ಯಾರು ಫ್ಲಾಟ್‌ಗೆ ಹೋಗಿಲ್ಲ ಅನ್ನೋದು ಬೆಳಕಿಗೆ ಬಂದಿದೆ. ಮನೆ ಕೆಲಸದವರ ವಿಚಾರಣೆ ಬಳಿಕ ದೂರುದಾರ ಮ್ಯಾನೇಜರ್ ನಾಗರಾಜ್ ಮತ್ತು ವಿಜಯಲಕ್ಷ್ಮಿ ತಾಯಿಯನ್ನು ವಿಚಾರಣೆ ನಡೆಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ.