ಬಳ್ಳಾರಿ: ಗಣೇಶ ವಿಸರ್ಜನೆ ವೇಳೆ ಎಎಸ್‍ಐವೊಬ್ಬರು ಮಂಗಳಮುಖಿಯೊಂದಿಗೆ ಡ್ಯಾನ್ಸ್ ಮಾಡುತ್ತಾ ಸಾರ್ವಜನಿಕವಾಗಿಯೇ ಮಂಗಳಮುಖಿಯನ್ನು ತಬ್ಬಿ ಮುದ್ದಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಮಂಗಳವಾರ ಬಡಾವಣೆ ಠಾಣೆಯ ಎಎಸ್‍ಐ ಎಜಿ ಗಡಗಡೆ ಮಂಗಳಮುಖಿಯರ ಜೊತೆ ಸಾರ್ವಜನಿಕವಾಗಿ ಡ್ಯಾನ್ಸ್ ಮಾಡಿ ಮಸ್ತಿ ಮಾಡಿದ್ದಾರೆ. ಅಷ್ಟೆ ಅಲ್ಲ ಮಂಗಳಮುಖಿಯನ್ನು ತಬ್ಬಿ ಮುದ್ದಾಡಿದ ವಿಡಿಯೋ ಹಾಗೂ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
ಹೊಸಪೇಟೆ ಪಟ್ಟಣದ ಗಾಂಧಿ ವೃತ್ತದ ಬಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಎಎಸ್‍ಐ ಗಡಗಡೆಯವರು, ನಸುಕಿನ ಜಾವ ಮೆರವಣಿಗೆ ನಡೆಸುತ್ತಾ ಗಣೇಶ ವಿಸರ್ಜನೆಗೆ ಹೊರಟ್ಟಿದ್ದ ಜಂಬೂ ಗಜಾನನ ಯುವಕ ಮಂಡಳಿಯ ಡಿಜೆ ಮೆರವಣಿಗೆ ಆಗಮಿಸುತ್ತಿದ್ದಂತೆ ಯುವಕರು ಹಾಗೂ ಮಂಗಳಮುಖಿಯರ ಜೊತೆಗೂಡಿ ಡ್ಯಾನ್ಸ್ ಮಾಡಿದ್ದಾರೆ.
ಮಫ್ತಿಯಲ್ಲಿದ್ದ ಎಎಸ್‍ಐ ಸಾಹೇಬರು ಮೊದಮೊದಲು ಯಾರಿಗೂ ಗೊತ್ತಾಗದಿದ್ದರೂ ಇದೀಗ ವಿಡಿಯೋ ವೈರಲ್ ಆದ ಬಳಿಕ ಎಎಸ್‍ಐ ಬಣ್ಣ ಬಯಲಾಗಿದೆ.
ಇದೇ ಎಎಸ್‍ಐ ಅಗಸ್ಟ್ 3ರಂದು ಶಾಮಿಯಾನ ಸಪ್ಲೈಯರ್ಸ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲೂ ಸಹ ಸಮವಸ್ತ್ರದಲ್ಲೆ ಡ್ಯಾನ್ಸ್ ಮಾಡಿದ್ದರು. 2 ವಿಡಿಯೋ ವೈರಲ್ ಆದ್ರೂ ಕೂಡ ಪೊಲೀಸ್ ಇಲಾಖೆ ಮಾತ್ರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಹೇಳಿದ್ದಾರೆ.
https://www.youtube.com/watch?v=7kMAht2vjGE&feature=youtu.be