– ಮಹಿಳೆ ಕೊಲೆ ಮಾಡಿ ಸುಟ್ಟು ಹಾಕಿರೋ ಹಂತಕರು
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು (Gouribidanur) ಮಾರ್ಗದ ಕಣಿವೆ ಬಳಿ ಪತ್ತೆಯಾಗಿದ್ದ ಮಹಿಳೆಯ ಮೃತದೇಹದ ಗುರುತು ಪತ್ತೆಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದು, ಪತ್ತೆ ಹಚ್ಚಿದವರಿಗೆ ಚಿಕ್ಕಬಳ್ಳಾಪುರ ಪೊಲೀಸ್ (Chikkaballapura Police) ಇಲಾಖೆಯಿಂದ ಬಹುಮಾನ ಘೋಷಿಸಿದ್ದಾರೆ.ಇದನ್ನೂ ಓದಿ: ಯಶವಂತಪುರ ಫ್ಲೈಓವರ್‌ನಲ್ಲಿ ಸಾಲು ಸಾಲು ಅಪಘಾತ – 18 ಜಿಲ್ಲೆ ಸಂಪರ್ಕಿಸುವ ಪ್ಲೈಓವರ್ ಬಳಿ ಸೂಚನಾ ಫಲಕಗಳೇ ಇಲ್ಲ
Advertisement
Advertisement
ಅ.10 ರಂದು ಜಿಲ್ಲೆಯ ಗೌರಿಬಿದನೂರು ಮಾರ್ಗದ ಕಣಿವೆ ಬಳಿ ಮಹಿಳೆಯ ಮೃತದೇಹವೊಂದು ಪತ್ತೆಯಾಗಿತ್ತು. ಅಪರಿಚಿತ ಮಹಿಳೆಯನ್ನ ಕೊಲೆ ಮಾಡಿ ಸುಟ್ಟು ಹಾಕಿದ್ದರು. ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಬರಿ ಮೂಳೆ, ಬಟ್ಟೆಬರೆ ಹಾಗೂ ಮೂಗುತಿ ಪತ್ತೆಯಾಗಿತ್ತು.
Advertisement
ಪೊಲೀಸರಿಗೆ ಮೃತ ಮಹಿಳೆಯ ಗುರುತು ಪತ್ತೆ ಹಚ್ಚುವುದೇ ಸವಾಲಾಗಿದ್ದು, ಕಂಪ್ಯೂಟರ್ ಆಧಾರಿತ ಮಹಿಳೆಯ ತ್ರೀಡಿ ಇಮೇಜ್ ರಚಿಸಲು ಮೊರೆ ಹೋಗಿದ್ದಾರೆ. ಅರೆಬರೆ ಬಟ್ಟೆ ಬರೆ, ಮೂಗುತಿ, ಬಳೆ ಆಧರಿಸಿ ಮಹಿಳೆಯ ಗುರುತು ಪತ್ತೆಗೆ ಮನವಿ ಮಾಡಲಾಗಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಹಿಳೆಯ ಗುರುತು ಪತ್ತೆಹಚ್ಚಿದರೆ ಬಹುಮಾನ ನೀಡುವುದಾಗಿ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ತಿಳಿಸಿದ್ದಾರೆ.ಇದನ್ನೂ ಓದಿ: ಪಾಕಿಸ್ತಾನಕ್ಕೆ ವಾಯುಮಾಲಿನ್ಯ ಕಂಟಕ – ಜನರ ಓಡಾಟಕ್ಕೆ ನಿಷೇಧ, ಅಂಗಡಿ-ಮಾರ್ಕೆಟ್ ತೆರೆಯಲು ಮಿತಿ