ನವದೆಹಲಿ: ಲಾಕ್‍ಡೌನ್ ನಡುವೆಯೇ ದೇಶಾದ್ಯಂತ ಪೊಲೀಸರು ಬಡವರಿಗೆ ಊಟ ಹಂಚುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಿಲಿಕಾನ್ ಸಿಟಿ ಪೊಲೀಸರು ಮನೆ ಇಲ್ಲದವರಿಗೆ ಹಾಗೂ ಬಡವರಿಗೆ ಉಚಿತ ಊಟ ಹಂಚುತ್ತಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಲಾಕ್‍ಡೌನ್ ವೇಳೆ ಜನರಿಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಪೊಲೀಸರು ನೀಡುತ್ತಿದ್ದಾರೆ. ಈ ಬಗ್ಗೆ ಬೆಂಗಳೂರು ಸಿಟಿ ಪೊಲೀಸರು ತಮ್ಮ ಟ್ವಿಟ್ಟರಿನಲ್ಲಿ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿದೆ.
Advertisement
Crackdown on criminals, or be compassionate? We can do both. While the city is on a lockdown owing to recent events, we are doing our bit. #Janasnehipolice #ArrestCorona pic.twitter.com/rcDXZedWZC
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) March 24, 2020
Advertisement
ಸುಪ್ರಿಯಾ ಎಂಬವರು ಮಾರ್ಚ್ 24ರಂದು ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ನಲ್ಲಿ ಅವರು, ‘ಪಂಜಾಬ್ ಪೊಲೀಸ್ ಇನ್ ಆ್ಯಕ್ಷನ್’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರು ಪೊಲೀಸರು ಬಡವರ ಮನೆಗೆ ತೆರಳಿ ದವಸಧಾನ್ಯ ಕೊಡುತ್ತಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
Advertisement
#Punjab police in action … ???????? pic.twitter.com/wz6Pc52Drz
— Supriya Bhardwaj (@Supriya23bh) March 24, 2020
Advertisement
ಉತ್ತರ ಪ್ರದೇಶದ ಬರೇಲಿ ಪೊಲೀಸರು ಕೂಡ ಬಡವರಿಗೆ ಊಟ ಹಂಚಿದ್ದಾರೆ. ಬರೇಲಿ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಪೊಲೀಸರು ಬಡವರಿಗೆ ಊಟ ಹಂಚುತ್ತಿರುವ ಫೋಟೋ ಹಾಕಿ ಅದಕ್ಕೆ, “ಎಸ್‍ಎಸ್‍ಪಿ ಶೈಲೇಶ್ ಅವರ ನಿರ್ದೇಶನದ ಮೆರೆಗೆ ಬರೇಲಿ ಪೊಲೀಸರು ಇಜತ್‍ನಗರದಿಂದ ವಿವಿಧ ಸ್ಥಳಗಳಲ್ಲಿ ಲಾಕ್‍ಡೌನ್‍ನಲ್ಲಿ ಸಿಲುಕಿರುವ ಬಡ ಮತ್ತು ಅಸಹಾಯಕ ಜನರಿಗೆ ಆಹಾರವನ್ನು ಒದಗಿಸಲಾಗಿದೆ” ಎಂದು ಟ್ವೀಟ್ ಮಾಡಿದೆ.
SSP-BRY @ShaileshP_IPS के निर्देश पर #bareillypolice इज्जतनगर द्वारा विभिन्न स्थानों पर लॉकडाउन में फंसे गरीब असहाय लोगों को भोजन उपलब्ध कराया गया। @Uppolice
#Uppolice @CMOfficeUP
@dgpup
@adgzonebareilly
@igrangebareilly
@112UttarPradesh
@moradabadpolice
@pilibhitpolice pic.twitter.com/t7eJLZ5oWD
— Bareilly Police (@bareillypolice) March 24, 2020