ಬೆಂಗಳೂರು: ಮಂಗಳೂರಿನಲ್ಲಿ (Mangaluru) ಈದ್ ಮಿಲಾದ್ (Eid Milad) ಗಲಾಟೆ, ನಾಗಮಂಗಲದ (Nagamangala) ಎಲ್ಲಾ ಕಡೆಯು ಪೊಲೀಸರು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿದ್ದಾರೆ ಎಂದು ಮಂಗಳೂರು ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದ್ದಾರೆ.
ಬೆಂಗಳೂರಿನಲ್ಲಿ(Bengaluru) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಕೆಲ ಕೋಮುವಾದಿ ಹೇಳಿಕೆಗಳಿಂದ ಗೊಂದಲ ಸೃಷ್ಟಿಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪರಿಸ್ಥಿತಿಯನ್ನು ಶಾಂತಿಯುತವಾಗಿ ಇಥ್ಯರ್ತ ಮಾಡಿದ್ದಾರೆ. ಕೆಲ ಮುಖಂಡರ ಮಾತಿನಿಂದ ಉದ್ವೇಗಕ್ಕೆ ಒಳಗಾಗಿ ಈ ರೀತಿ ಘಟನೆ ಸಂಭವಿಸಿದೆ. ಬಂಟ್ವಾಳದಲ್ಲಿ ಕಲ್ಲು ತೂರಾಟ ನಡೆದಿದೆ. ಮಂಗಳೂರು ಸೂಕ್ಷ್ಮ ಪ್ರದೇಶ, ಈ ರೀತಿಯ ಘಟನೆಗಳಿಗೆ ಪ್ರಚೋದನೆ ಇದ್ದೇ ಇರುತ್ತದೆ. ಎಲ್ಲಾ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಶ್ಮೀರ ಈಗ ಸುರಕ್ಷಿತವಾಗಿರುವುದರಿಂದ ರಾಹುಲ್ ಬಾಬಾ ಐಸ್‌ಕ್ರೀಂ ತಿಂದಿದ್ದಾರೆ, ಬೈಕ್ ರೈಡ್ ಮಾಡಿದ್ದಾರೆ: ಅಮಿತ್ ಶಾ
Advertisement
ಶಾಂತಿಭಂಗ ಯಾರೂ ಮಾಡಬಾರದು. ಕೆಲ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕೆಲವರು ಪ್ರಚೋದನೆ ಮಾಡುತ್ತಾರೆ. ಅವರಿಗೆ ಶಾಂತಿ ನೆಮ್ಮದಿ ಇರಬಾರದು. ಅತಿಯಾದ ಕೋಮುವಾದದ ಮನಸ್ಥಿತಿಯಿಂದ ಹೀಗಾಗುತ್ತದೆ. ಘಟನೆ ಆದಾಗ ಕಾನೂನು ಪ್ರಕಾರ ಕ್ರಮಕ್ಕೆ ಪೊಲೀಸ್ ಮುಂದಾಗುತ್ತಾರೆ. ಇದು ಇಂಟಲಿಜೆನ್ಸ್ ಫೈಲ್ಯೂರ್ ಅಲ್ಲ.ಎಲ್ಲಾ ಕಡೆ ಪೊಲೀಸರು ಇರಲು ಸಾಧ್ಯವಿರಲ್ಲ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ನಿಫಾ ವೈರಸ್ ಭೀತಿ, ಕೇರಳಕ್ಕೆ ತೆರಳಿದ 25 ಜನರಿಗೆ ಟೆಸ್ಟ್: ದಿನೇಶ್ ಗುಂಡೂರಾವ್
Advertisement
ನಾಗಮಂಗಲ ಪ್ರಕರಣದಲ್ಲಿ ಪೊಲೀಸ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಎರಡು ಕಡೆ ಹೇಳಿಕೆಯನ್ನು ಪಡೆದಿದ್ದಾರೆ. ನಮ್ಮ ಇಲಾಖೆಯವರು ಶಾಂತಿ ತರುವ ಪ್ರಯತ್ನ ಮಾಡುತ್ತಿದ್ದಾರೆ. ಆರ್ ಅಶೋಕ್ (r Ashok) ಅವರಿಗೆ ಒಂದೇ ಕೋಮಿನ ಮೇಲೆ ಅತಿಯಾದ ಪ್ರೀತಿ. ಅವರು ಒಂದೇ ಕೋಮಿನ ಮೇಲೆ ದ್ವೇಷ ಮಾಡುತ್ತಾರೆ. ಹಿಂದೂಗಳು ಏನು ಮಾಡಿದರೂ ಅವರಿಗೆ ಸರಿ ಎಂದು ಹರಿಹಾಯ್ದರು. ಇದನ್ನೂ ಓದಿ: ಬಿ.ಸಿ.ರೋಡ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ – 48 ಗಂಟೆಗಳ ಕಾಲ ಮದ್ಯದಂಗಡಿ ಬಂದ್
Advertisement
Advertisement
ನಮ್ಮ ಸರ್ಕಾರಕ್ಕೆ ಎಲ್ಲಾ ಜನಾಂಗದವರು ಬೇಕು. ತಪ್ಪು ಮಾಡುವವರು ಎಲ್ಲಾ ಪಕ್ಷ, ಎಲ್ಲಾ ಜನಾಂಗದಲ್ಲೂ ಇರುತ್ತಾರೆ. ನಮ್ಮ ಸರ್ಕಾರ ಯಾವುದೇ ಪಕ್ಷಪಾತ ಮಾಡುವುದಿಲ್ಲ. ರಾಜಕೀಯ ಮಾಡಿ ಲಾಭ ಪಡೆದುಕೊಳ್ಳುವ ಪಕ್ಷ ಯಾವುದು ಎಂದು ಜನರಿಗೆ ತಿಳಿದಿದೆ. ಮುಸ್ಲಿಂ ಯುವಕರಿಗೆ ಬೈಕ್ ರ‍್ಯಾಲಿಗೆ ಅನುಮತಿ ಕೊಡೋದು ತಪ್ಪು ಅಂತ ಹೇಳಲಾಗುವುದಿಲ್ಲ. ನಾಗಮಂಗಲ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿರುವ ಇಬ್ಬರು ಅರೆಸ್ಟ್ ಆಗಿದ್ದಾರೆ ಎನ್ನಲಾಗಿದೆ. ಉದ್ದೇಶ ಪೂರ್ವಕವಾಗಿ ಗಲಭೆ ಮಾಡಿಸಿರಲು ಸಾಧ್ಯವಿಲ್ಲ. ಕೋಮವಾದದಲ್ಲಿ ನಂಬಿಕೆ ಇಟ್ಟವರು ಹೀಗೆ ಮಾಡಿಸುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವಿಶ್ವದ ಮೊದಲ ಖಾಸಗಿ ಬಾಹ್ಯಕಾಶ ನಡಿಗೆ ಯಶಸ್ವಿ – ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್
ಗುಜರಾತ್‌ನಲ್ಲಿ (Gujarat) ಆದ ಪ್ರಕರಣದ ಬಗ್ಗೆ ಮೋದಿ ಅವರು ಮಾತನಾಡುವುದಿಲ್ಲ. ಆದರೆ ನಾಗಮಂಗಲದ ಬಗ್ಗೆ ಮಾತನಾಡುತ್ತಾರೆ. ಮಣಿಪುರ ಬೆಂಕಿ ಹಚ್ಚಿ ಉರಿತಿದೆ. ಈ ತನಕ ಪಿಎಂ ಒಂದೇ ಒಂದು ಮಾತಾನಾಡಲಿಲ್ಲ. ಅವರು ರಾಜ್ಯದಲ್ಲಿ ಆಗುವ ದುರ್ಘಟನೆ ಬಗ್ಗೆ ಮಾತಾಡಲ್ಲ, ನಮ್ಮ ರಾಜ್ಯದಲ್ಲಿ ಆಗುವ ಗಲಭೆ ಅವರಿಗೆ ರಾಷ್ಟ್ರೀಯ ಸುದ್ದಿ. ಬಂಟ್ವಾಳದಲ್ಲಿ (Bantwal) ಶಾಂತಿಯುತ ಮೆರವಣಿಗೆ ನಡೆದಿದೆ. ಸುರತ್ಕಲ್‌ನಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ ಆಗಿದೆ. ಕೃತ್ಯವೆಸಗಿದವರನ್ನು ಪೊಲೀಸ್ ಅರೆಸ್ಟ್ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಈದ್ ಮಿಲಾದ್ ಹೊತ್ತಲ್ಲೇ ರಾಜ್ಯದಲ್ಲಿ ಪ್ಯಾಲೆಸ್ತೀನ್ ಪ್ರೇಮ – ಚಿಕ್ಕಮಗಳೂರಲ್ಲಿ ಬಾವುಟ; 6 ಮಂದಿ ವಿರುದ್ಧ ಕೇಸ್
ನನ್ನ ಮನವಿ ಏನೆಂದರೆ ಯಾರು ಕೂಡ ಅನವಶ್ಯಕವಾಗಿ ಗೊಂದಲ ಸೃಷ್ಟಿಸಬಾರದು. ಶಾಂತಿಭಂಗ ಪ್ರಯತ್ನ ಮಾಡಬಾರದು, ಯಾರೋ ಮಾಡೋ ತಪ್ಪಿನಿಂದ ಸಮಾಜದಲ್ಲಿ ಹೀಗೆ ಆಗುತ್ತದೆ. ಬಂಟ್ವಾಳದ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟವರನ್ನು ಬಂಧಿಸಲಾಗಿದೆ. ನಾಗಮಂಗಲ ಪ್ರಕರಣದ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಯಾರೇ ಕಿಡಿಗೇಡಿಗಳು ಇರಲಿ ಕ್ರಮ ತೆಗೆದುಕೊಳ್ಳಲು ನಮ್ಮ ಇಲಾಖೆ ಇದೆ. ಅಶೋಕ್ ಅವರು ಒಂದೇ ಕೋಮಿನ ಮೇಲೆ ದ್ವೇಷ ಸಾಧಿಸುತ್ತಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಇರಲಿ ಯಾರು ತಪ್ಪು ಮಾಡಿದರೂ ನಾವು ಕ್ರಮ ಕೈಗೊಳ್ಳುತ್ತೇವೆ ತಿಳಿಸಿದರು. ಇದನ್ನೂ ಓದಿ: ಮಂಗಳವಾರ ಸಚಿವ ಸಂಪುಟ ಸಭೆ – ಇಂದೇ ಕಲಬುರಗಿ ತಲುಪಿದ ಸಿಎಂ
ಅಶೋಕ್ ಅವರಿಗೆ ಹಿಂದುಗಳ ಬಗ್ಗೆ ಯಾವ ಆಲೋಚನೆಯೂ ಇರುವುದಿಲ್ಲ. ಅವರು ಏನಾದರು ಮಾಡಲಿ ಎಂದು ಮಾತನಾಡುತ್ತಾರೆ. ಆದರೆ ನಮಗೆ ಹಾಗಲ್ಲ, ನಮಗೆ ರೂಲ್ ಆಫ್ ಲಾ ಇರಬೇಕು. ನಾಗಮಂಗಲದಲ್ಲಿ ನಮ್ಮ ಪಕ್ಷದವರು ಕೂಡ ಇದ್ದಾರೆ ಎಂದು ಗೊತ್ತಾಯಿತು. ಹಿಂದೆ ಮುಂದೆ ನೋಡದೇ ಕೂಡಲೇ ಕ್ರಮ ಕೈಗೊಂಡಿದ್ದೇವೆ. ತಪ್ಪು ಮಾಡುವವರು ಎಲ್ಲಾ ಪಕ್ಷದಲ್ಲೂ ಇರ್ತಾರೆ. ಕಾನೂನಿನ ಕ್ರಮ ಇದ್ದಾಗಷ್ಟೇ ಜನರಿಗೆ ವಿಶ್ವಾಸ ಹುಟ್ಟುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕೋಮುಗಲಭೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ: ಅಶೋಕ್ ಆಗ್ರಹ