ಆನೇಕಲ್: ಪೊಲೀಸರ (Police) ಕಿರುಳಕ್ಕೆ ಬೇಸತ್ತು ಯುವಕನೋರ್ವ (Youth) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ (Bengaluru) ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುಗಳೂರಿನ ಭೋವಿಪಾಳ್ಯದ ನಿವಾಸಿ ಸುರೇಶ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ಸುರೇಶ್ ಇತ್ತೀಚೆಗಷ್ಟೇ ಸರ್ಜಾಪುರದ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದ. ಪೊಲೀಸರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸುರೇಶ್ ವೀಡಿಯೋ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾನೆ.
Advertisement
Advertisement
ಸುರೇಶ್ ಕಾಡಗೋಡಿ ಸಮೀಪದ ಸೀಗೆಹಳ್ಳಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಪ್ರೀತಿಯ ವಿಚಾರ ಯುವತಿಯ ತಂದೆ-ತಾಯಿಗೆ ತಿಳಿದು ಪೊಲೀಸರ ಮೂಲಕ ಕರೆ ಮಾಡಿಸಿ, ಅತ್ಯಾಚಾರದ ಕೇಸ್ ದಾಖಲಿಸುವುದಾಗಿ ಹೆದರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸುರೇಶ್, ನನ್ನ ಸಾವಿಗೆ ಕಾಡುಗೋಡಿ ಪೊಲೀಸರು, ಯುವತಿಯ ತಂದೆ-ತಾಯಿ ಹಾಗೂ ಮತ್ತೊಂದು ಯುವತಿ ಕಾರಣ ಎಂದು ಆರೋಪಿಸಿದ್ದಾನೆ.
Advertisement
ಅದಾದ ಬಳಿಕವೂ ಕಳೆದ ಒಂದು ವಾರದಿಂದ ಪೊಲೀಸರೆಂದು ಹೇಳಿಕೊಂಡು ನಿರಂತರ ಕರೆಗಳು ಬರುತ್ತಿದ್ದವು. ಅಷ್ಟೇ ಅಲ್ಲದೇ ಠಾಣೆಗೆ ಬರುವಂತೆ ನಿರಂತರವಾಗಿ ಫೋನ್ ಮಾಡುತ್ತಿದ್ದ ಆರೋಪವೂ ಕೇಳಿಬಂದಿದೆ. ಫೋನ್ ಕರೆಗಳಿಂದ ಗಾಬರಿಗೊಂಡಿದ್ದ ಸುರೇಶ್ ಇಲಿ ಪಾಷಾಣ ಸೇವಿಸಿದ್ದಾನೆ. ಅಷ್ಟೇ ಅಲ್ಲದೇ ಬಾಟಲಿಯಿಂದ ತಲೆಗೆ ಹೊಡೆದುಕೊಂಡು, ಕೈ ಕೊಯ್ದುಕೊಂಡು ವೀಡಿಯೋ ಮಾಡಿ ಹಂಚಿಕೊಂಡಿದ್ದಾನೆ. ಇದನ್ನೂ ಓದಿ: ಕೆಂಗಲ್ ಹನುಮಂತಯ್ಯ ಜೀವನ ಚರಿತ್ರೆ ಗ್ರಂಥ ಈ ವರ್ಷ ಬಿಡುಗಡೆ: ಬೊಮ್ಮಾಯಿ
Advertisement
ಅಸ್ವಸ್ಥಗೊಂಡಿದ್ದ ಸುರೇಶ್ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಜಾಪುರದ ಬಾಲಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಸರ್ಜಾಪುರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸಕಾಲಕ್ಕೆ ಬಾರದ ಅಂಬುಲೆನ್ಸ್ – 4 ದಿನದ ಹಸುಳೆ ಸಾವು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k